“ಯುವಜನಾಂಗ ಸದ್ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು”- ಸಂತೋಷಕುಮಾರ್.
ಚಳ್ಳಕೆರೆ : ಯುವಜನಾಂಗ ಸದ್ಗ್ರಂಥಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಸಂತೋಷಕುಮಾರ ಅಗಸ್ತ್ಯ ತಿಳಿಸಿದರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕಾರ್ಯಕ್ರಮದ ಆರಂಭದಲ್ಲಿ ಭಜನೆ ಮತ್ತು ವೇದಮಂತ್ರಗಳನ್ನು ಕನಕಪುರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ಜ್ಯೋತ್ಸ್ನಾಮಯೀ ಅವರು ಹೇಳಿಕೊಟ್ಟರೆ, ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ ಧ್ಯಾನಾಭ್ಯಾಸ ಮಾಡಿಸಿದರು.
ಈ ತರಗತಿ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸ್ವಯಂಸೇವಕರಾದ ಅಭಿಲಾಷ್,ಯತೀಶ್ ಎಂ ಸಿದ್ದಾಪುರ, ಡಾ.ಭೂಮಿಕ, ಚೇತನ್, ಮಂಜುಳ ಉಮೇಶ್, ಜಿ.ಯಶೋಧಾ ಪ್ರಕಾಶ್,ಸಂಜನ, ಋತಿಕ್, ಅಂಬಣ್ಣ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

