ವಿಶ್ವದ ಅನೇಕ ದೇಶಗಳು ಮತ್ತು ವಿಶ್ವಸಂಸ್ಥೆ ಯ ಭದ್ರತಾ

ಚಳ್ಳಕೆರೆ :

“ಆಪರೇಷನ್ ಸಿಂಧೂ‌ ಜಿಂದಾಬಾದ್”

ಚಳ್ಳಕೆರೆ: ಪೆಹಲ್ಟಾಮ್‌ನಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು, 28 ಅಮಾಯಕ ಪ್ರವಾಸಿಗರ
ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ ರಾಕ್ಷಸೀ ಕೃತ್ಯವನ್ನು ಚಳ್ಳಕೆರೆಯ ಭಾರತೀಯ ಮುಸ್ಲಿಂ
ಭಾಂದವರು ಖಂಡಿಸುತ್ತೇವೆ ಎಂದಿದ್ದಾರೆ.

ವಿಶ್ವದ ಅನೇಕ ದೇಶಗಳು ಮತ್ತು ವಿಶ್ವಸಂಸ್ಥೆ ಯ ಭದ್ರತಾ
ಮಂಡಳಿಯೂ ಸಹ ಪಾಕಿಸ್ತಾನ ವನ್ನು ತರಾಟೆಗೆ ತೆಗೆದುಕೊಂಡಿವೆ.
ಪೆಹಲ್ಯಾಮ್ ದಾಳಿಗೆ ಪ್ರತ್ಯುತ್ತರವಾಗಿ ಆಪರೇಷನ್ ಸಿಂಧೂರ್ ಮೂಲಕ, 9 ಉಗ್ರಗಾಮಿ
ಶಿಬಿರಗಳ ಮೇಲೆ ದಾಳಿ ನಡೆಸಿ ಅನೇಕ ಉಗ್ರರನ್ನು ಸಂಹರಿಸುವುದರ ಮೂಲಕ ಭಾರತದ ಸೈನಿಕರು
ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ್ದಾರೆ.

ವಿದೇಶಾಂಗ
“ಆಪರೇಷನ್ ಸಿಂಧೂರ್” ಕಾರ್ಯಾಚರಣೆ ಯಶಸ್ವಿಯಾಗಲು ಶ್ರಮಿಸಿದ ಭಾರತದ
ಕಾರ್ಯದರ್ಶಿ ವಿಕ್ರಂಮಿಸಿ, ಭಾರತೀಯ ಸೇನೆಯ ಸೋಫೀಯಾಖುರೇಷಿ,
ವ್ಯೂಮಿಕಾಸಿಂಗ್‌, ಪಾಕಿಸ್ತಾನದ 100 ಕಿಮೀ ವ್ಯಾಪ್ತಿ ಪ್ರದೇಶದ ಒಳಗೆ ನುಗ್ಗಿ ಭಯೋತ್ಪಾದಕರ ಅಡಗು
ತಾಣಗಳನ್ನು ನಾಶಪಡಿಸಿ ಮೂವರು ಉಗ್ರ ಕಮಾಂಡರ್‌ಗಳನ್ನು ಹತ್ಯೆಗೈದ ವೀರಯೋಧ
ಗೋಬಿದ್‌ ಸಿಂಗ್‌, ರೆಫೆಲ್ ವಿಮಾನವನ್ನು ಪ್ರಥಮ ಬಾರಿಗೆ ಉಡಾಯಿಸಿದ ಇಲಾಲ್‌ ಅಹಮದ್‌,
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸೈನಿಕರಿಗೆ ಎಲ್ಲಾ ರೀತಿಯಿಂದಲೂ ಧೈರ್ಯತುಂಬಿ ತಮ್ಮ
ಪ್ರಬುದ್ಧ ನಡೆಯನ್ನು ಪ್ರದರ್ಶಿಸಿದ ಪ್ರಧಾನಿ ಮೋದಿಯವರು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್
ಇವರೆಲ್ಲರಿಗೂ, ಚಳ್ಳಕೆರೆ ತಾಲ್ಲೂಕಿನ ಭಾರತೀಯ ಮುಸ್ಲಿಂ ಭಾಂದವರ ಪರವಾಗಿ ಕೋಟಿ ಕೋಟಿ
ಸೆಲ್ಯೂಟ್ ಗಳನ್ನು ಸಲ್ಲಿಸುತ್ತೇವೆ.

ಉಗ್ರರ ಕೃತ್ಯಕ್ಕೆ ಅಡ್ಡಿಪಡಿಸಿ ತನ್ನ ಪ್ರಾಣವನ್ನು ಕಳೆದುಕೊಂಡ ಮಾನವ ಪ್ರೇಮಿ, ಕುದುರೆ
ಸವಾರ ಸೈಯ್ಯದ್‌ ಆದಿಲ್‌ ಹುಸೇನ್‌ಶಾ ರವರಿಗೆ ವೀರ ನಮನಗಳನ್ನು ಸಲ್ಲಿಸುತ್ತೇವೆ.
ಮಾಡಲು
ಉಂಟಾಗುವಂತೆ
ಮತೀಯ ಸಂಘರ್ಷ
ಪಹಲ್ಟಾಮ್ ಘಟನೆ ಕುರಿತು
ಹವಣಿಸುತ್ತಿರುವ ಕೆಲವು ಸುದ್ದಿವಾಹಿನಿಗಳ ವಿರುದ್ಧ ಮತ್ತು ಪ್ರಚೋದನಕಾರಿ ಭಾಷಣಗಳನ್ನು
ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುವುದರ ಮೂಲಕ, ಪ್ರಧಾನಮಂತ್ರಿ
ನರೇಂದ್ರಮೋದಿಯವರು ದೇಶದಲ್ಲಿ ಕೋಮುಸೌಹಾರ್ದತೆಯನ್ನು ಕಾಪಾಡಬೇಕೆಂದು ಪ್ರಾರ್ಥಿಸುತ್ತೇವೆ.

About The Author

Namma Challakere Local News
error: Content is protected !!