ನಾಯಕನಹಟ್ಟಿ:: ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡ್ಡದ ಕಪಿಲೆ ಹತ್ತಿರ ಕಾಂಟೂರ್ ಬಂಡಿಂಗ್ ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದರು
2022 -23 ನೇ ಸಾಲಿನ ನರೇಗಾ ಯೋಜನೆಯಲ್ಲಿ ಕೂಲಿಕಾರ್ಮಿಕರಿಗೆ ನೂರು ದಿನಗಳ ಕಾಲ ಕೆಲಸ ಮಾಡಲು ಬಯಸುವವರು ಕೆಲಸವನ್ನು ಪಡೆದುಕೊಳ್ಳಬಹುದು ಎಂದು ಉಪಾಧ್ಯಕ್ಷ ಬಿ ಕಾಟಯ್ಯ ಹೇಳಿದರೆ.
ಅವರು ಇಂದು
ಉದ್ಯೋಗ ಖಾತ್ರಿ ಕಾಮಗಾರಿಯನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿ ಶೈಕ್ಷಣಿಕ ವರ್ಷದ 2023 ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರು ಗೂಳಿ ಹೋಗುವುದನ್ನು ತಪ್ಪಿಸಲು ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.
ಈ ವೇಳೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇನಾಯಿತ್ ಭಾಷಾ ರವರು ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಬಲ್ಲ ನಾಯಕನಹಟ್ಟಿ ಸೇರಿದಂತೆ ಗ್ರಾಮಸ್ಥರು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನೂರು ದಿನಗಳ ಕಾಲ ಕೆಲಸ ಪಡೆಯಬಹುದು ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ದಳವಾಯಿ ,ಬಿ ವೀರೇಶ್, ಇಂಜಿನಿಯರ್ ದೀಪ್ತಿ ಕಾಯಕ ಮಿತ್ರ ಕೆ ಗೀತಮ್ಮ, ಬಿ,ಎಫ್, ಟಿ,ಕ್ಯಾಸಯ್ಯ ನಲಗೇತನಹಟ್ಟಿ ಸೇರಿದಂತೆ ಇನ್ನು ಕೂಲಿ ಕಾರ್ಮಿಕರು ಮುಂತಾದವರು ಉಪಸ್ಥಿತರಿದ್ದರು