ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿರುವ ಸರಕಾರಿ ಐಟಿಐ ಕಾಲೇಜ್‌ನಲ್ಲಿ ಕೌಶಲ್ಯಾಭಿವೃದ್ದಿ ಉದ್ಯಾಮಶೀಲತೆ ಮತ್ತು ಜೀವನೋಪಾಯ ಇಲಾಖೆ ಟಿಟಿಎಲ್ ಸಹಯೋಗದೊಂದಿಗೆ ತಾಂತ್ರಿಕ ಕೇಂದ್ರವನ್ನಾಗಿ ಉನ್ನತಿಕರಿಸಲಾಗಿರುವ ಚಳ್ಳಕೆರೆ ಐಟಿಐ ಕಾಲೇಜಿನ ಕಟ್ಟಡದ ಲೋಕಾರ್ಪಣೆ ಮತ್ತು ಉದ್ಘಾಟನಾ ಕಾರ್ಯಕ್ರದಲ್ಲಿ ಕ್ಷೆತ್ರದ ಶಾಸಕ ಟಿ.ರಘುಮೂರ್ತಿ ಭಾಗವಹಿಸಿ ಕಟ್ಟಡದ ಉದ್ಘಾಟನೆ ನೆರೆವೆರಿಸಿ ಮಾತನಾಡಿದರು, ಸ್ವಾತಂತ್ರ‍್ಯ ಪೂರ್ವದಲ್ಲಿ ಪ್ರಾರಂಭವಾದ ಈ ವೃತ್ತಿಪರ ಕೋರ್ಸ್ಗಳು ಇಂದಿನ ಯುವ ಜನತೆಗೆ ಜೀವನ ಕಟ್ಟಿಕೊಳ್ಳಲು ನೆರವಾಗಿವೆ, ಜೊತೆಗೆ ಜಿಟಿಟಿಸಿ ಕೇಂದ್ರ ಉನ್ನತಿಕರಿಸಿದ ವ್ಯಾಸಂಗವಾಗಿ ಈ ಕೋರ್ಸ ಮುಗಿದ ಬಳಿಕ ನೇರವಾಗಿ ಎರಡನೇ ವರ್ಷದ ಇಂಜಿನಿಯಾರ್ ವ್ಯಾಸಂಗ ಪಡೆಯಬಹುವುದು, ಆದೇ ರೀತಿಯಲ್ಲಿ ಕೂಡ ಐಟಿಐ ವ್ಯಾಸಂಗ ಮುಗಿದ ಬಳಿಕ ಡಿಪ್ಲೋಮ್ ವ್ಯಾಸಂಗ ಮಾಡಬಹುದು ಜೊತೆಗೆ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶನವಾಗಿದೆ.
ಇಂದಿನ ದಿನಗಳಲ್ಲಿ ಉನ್ನತ್ತ ಹುದ್ದೆಗೇರುವ ಆಸೆಯಿಂದ ತಮ್ಮ ದೊಡ್ಡ ದೊಡ್ಡ ಕೋರ್ಸ್ಗಳಿಗೆ ಪ್ರವೇಶ ಪಡೆದು ಅರ್ಧಕ್ಕೆ ಮೊಟುಕುಗೊಳಿಸುವರ ಪ್ರಮಾಣ ಹೆಚ್ಚಾಗಿದೆ ಆದ್ದರಿಂದ ಪೋಷಕರು ತಮ್ಮ ಮಕ್ಕಳ ಆಸಕ್ತಿಗೆ ಅನುಗುಣವಾಗಿ ವ್ಯಾಸಂಗಕ್ಕೆ ಅನುವು ಮಾಡಿಕೊಡಬೇಕು ಎಂದರು.

ಇನ್ನೂ ನಗರಸಭೆ ಸದಸ್ಯ ಕೆ.ವೀರಭದ್ರಯ್ಯ ಮಾತನಾಡಿ, ಈಗೀನ ಕೋರ್ಸುಗಳ ಮೂಲಕ ಉದ್ಯೋಗ ಖಾಯಂ ಹಾಗುವ ವರದಾನವಾಗಿದೆ. ಈ ಹಿಂದೆ ಬಹಳಷ್ಟು ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿ ಕಂಪನಿಗಳನ್ನು ಅಲೆಯುವ ಪರಸ್ಥಿತಿ ನಿರ್ಮಾಣವಾಗಿತ್ತು ಆದರೆ ಈಗ ವಿವಿಧ ಕೋರ್ಸ್ಗಳ ಮೂಲಕ ವಿವಿಧ ಕಂಪನಿಗಳಲ್ಲಿ ವ್ಯಾಸಂಗದ ತರುವಾಯ ಉದ್ಯೋಗ ಪಡೆಯಬಹುದು ಎಂದರು.
ಇದೇ ಸಂಧರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಮಂಜುಳಾ, ಸದಸ್ಯ ರಮೇಶ್ ಗೌಡ, ಸುಜಾತಾ, ಕವಿತಾ, ಜೈತುನ್ ಬಿ, ಸುಮಾ ಭರಮಣ್ಣ, ಪ್ರಾಶುಂಪಾಲ ಬಸಣ್ಣ, ಉಪನ್ಯಾಸಕ ಸತ್ಯಣ್ಣ ಇತರರು ಪಾಲ್ಗೊಂಡಿದ್ದರು

Namma Challakere Local News
error: Content is protected !!