ಚಳ್ಳಕೆರೆ : ಪ್ರಪ್ರಥಮ ಬಾರಿಗೆ ಚಳ್ಳಕೆರೆ ನಗರದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸುಮಾರು 11 ಸಾವಿರದ ನೂರ ಹನ್ನೊಂದು ಯೋಗ ಬಂಧುಗಳೊಂದಿಗೆ ಬೃಹತ್ ವೇದಿಕೆಯ ಮೂಲಕ ಯೋಗ ದಿನಾಚರಣೆ ಆಚರಿಸುವ ಸಲುವಾಗಿ ಇಂದು ನಗರದ ಶ್ರೀ ಪಂತಂಜಲಿ ಯೋಗ ಶಿಕ್ಷಣ ಸಮಿತಿವತಿಯಿಂದ ಬೈಕ್ ಜಾಥ ನಡೆಯಿತು


ನಗರದ ಪ್ರಥಮ ದರ್ಜೆ ಕಾಲೇಜ್ ಮೈದಾನದಲ್ಲಿ ತಾಲ್ಲೂಕು ಆಡಳಿತ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಚಳ್ಳಕೆರೆ ಸಹಯೋಗದಲ್ಲಿ ನಡೆಯುವ 8ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ, ಯೋಗ ಡೇ ಮುನ್ನಾ ದಿನವಾದ ಸೋಮವಾರ ಬೈಕ್ ಜಾಥಾ ಮಾಡಿದರು.


ರಾಜ್ಯದ ಮೈಸೂರು ನಗರದಲ್ಲಿ ನಡೆಯುವ ಯೋಗ ಪೇರೆಡ್ ಮಾದರಿಯಲ್ಲಿ ಬೃಹತ್ ವೇದಿಕೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಗುವುದು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ತಹಶೀಲ್ದಾರ್ ಎನ್.ರಘುಮೂರ್ತಿ ನೇತೃತ್ವದಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಶಾಲಾ ಮಕ್ಕಳು, ತಾಲೂಕು ಮಟ್ಟದ ಅಧಿಕಾರಿಗಳು ಒಳಗೊಂಡ ಯೋಗ ಬಂಧುಗಳು ಹಾಗೂ ಸಾರ್ವಜನಿಕರು ಬೃಹತ್ ವೇದಿಕೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಗುವುದು ಎಂದಿದ್ದಾರೆ.


ಶ್ರೀ ಪತಂಜಲಿ ಶಿಕ್ಷಣ ಸಮಿತಿ ಪ್ರಚಾರಕ್‌ಸಿ. ತಿಪ್ಪೇಸ್ವಾಮಿ ಮಾಸ್ಟರ್ ಬೈಕ್ ಜಾಥಕ್ಕೆ ಚಾಲನೆ ನೀಡಿದರು, ಶಿಕ್ಷಣ ಪ್ರಮುಖ ಬಿ.ವಿ. ಮನೋಹರ್, ಮಾಧವ್‌ರಾವ್, ಸಿಎಲ್ ತಿಪ್ಪೇಸ್ವಾಮಿ, ಗಂಗಾಧರ್, ಶಿವನಾಗಪ್ಪ, ಡಿಶ್.ನಾಗಣ್ಣ, ಮುಂತಾದವರ ಮಾರ್ಗದರ್ಶನದಲ್ಲಿ ಜೈರಾಮ್ ಬಾಬು ನೇತೃತ್ವದಲ್ಲಿ ಹೆಗ್ಗೆರೆ ತಾಯಮ್ಮ ಶಾಲೆಯಿಂದ ಪ್ರಥಮ ದರ್ಜೆ ಕಾಲೇಜ್ ಮೈದಾನ, ನೆಹರು ಸರ್ಕಲ್, ಬಸವೇಶ್ವರ ಸರ್ಕಲ್ ಎಸ್‌ಆರ್ ರಸ್ತೆ ಮುಂತಾದ ಕಡೆ ಬೈಕ್ ಜಾಥ ಯಶಸ್ವಿಯಾಗಿ ಜರುಗಿತು.

About The Author

Namma Challakere Local News
error: Content is protected !!