ಭಾರತೀಯ ಸೇನೆಗೆ ಹಾಗೂ ಯೋಧರಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಶಕ್ತಿ ಸಾಮರ್ಥ್ಯವನ್ನು ನೀಡಲಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್.

ನಾಯಕನಹಟ್ಟಿ:: ಭಾರತೀಯ ಸೇನೆಗೆ ಹಾಗೂ ಯೋಧರಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆಶೀರ್ವಾದದಿಂದ ಒಳಿತಾಗಲಿ ಎಂದು ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ ಹೇಳಿದರು .

ಗುರುವಾರ ನಾಯಕನಹಟ್ಟಿ ಪಟ್ಟಣದ ಒಳಮಠದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಆಪರೇಷನ್, ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆಯ ಯೋಧರು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧಂಸ ಮಾಡಿರುವ ಕೀರ್ತಿ ಭಾರತೀಯರು ಸೇನೆಗೆ ಸಲ್ಲುತ್ತದೆ ಇತ್ತೀಚಿಗೆ ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ದಾಳಿಯಲ್ಲಿ ಭಾರತೀಯ 26 ಜನ ಯುವಕರು ಸಾವನ್ನಪ್ಪಿದ್ದರು. ಮಹಿಳೆಯರ ಕುಂಕುಮ ಅಳಿಸಿತ್ತು ಪಾಕಿಸ್ತಾನ ಪ್ರತಿಕಾರವಾಗಿ ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಮಹಿಳಾ ಕಮಾಂಡರ್ ಮೂಲಕ ಪಾಕಿಸ್ತಾನದ ಒಳಗಡೆ ನುಗ್ಗಿ 9 ಉಗ್ರಗಾಮಿಗಳ ನೆಲೆಗಳನ್ನ ಧ್ವಂಸ ಮಾಡಿರುವ ಕೀರ್ತಿ ನಮ್ಮ ಸೈನಿಕರಿಗೆ ಸಲ್ಲುತ್ತದೆ ಆದ್ದರಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಮ್ಮ ಭಾರತ ದೇಶದ ಸೇನೆಗೆ ಆಗುವ ಯೋಧರಿಗೆ ಉತ್ತಮ ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ಎಂದರು.

ನಿಕಟ ಪೂರ್ವ ಮಂಡಲ ಅಧ್ಯಕ್ಷ ಎಂ.ವೈ.ಟಿ ಸ್ವಾಮಿ, ಮಾತನಾಡಿದರು ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಸಂಕಲ್ಪದಂತೆ ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಹಮಾಯುಕ್ರು ಮರಣ ಹೊಂದಿದರು ಪಾಕಿಸ್ತಾನದ ಉಗ್ರರು ಹಿಂದುಗಳನ್ನ ಗುರುತಿಸಿ ಗುಂಡಿಟ್ಟು ಕೊಂದರು ಅಂದೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಸಂಕಲ್ಪವನ್ನು ತೆಗೆದುಕೊಂಡರು ಯಾವ ತಾಯಂದಿರ ಕುಂಕುಮ ಅಳಿಸಿದ್ದಾರೆ ನುಡಿದಂತೆ ನಡೆಯುವ ಮೂಲಕ ದಿನಾಂಕ 07.05.2025ರ ರಾತ್ರಿ ಸುಮಾರು ಒಂದು ಮೂವತ್ತರ ವೇಳೆಗೆ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದಾರೆ ಆದ್ದರಿಂದ ನಮ್ಮ ಭಾರತ ಸೇನೆಯ ಯೋಧರಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಿತನು ಮಾಡಲಿ ಎಂದರು.

ಇದೇ ಸಂದರ್ಭದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ, ನಗರ ಘಟಕ ಅಧ್ಯಕ್ಷ ಎನ್ ಮಹಾಂತಣ್ಣ, ಓಬಣ್ಣ, ಕೆ.ಆರ್ .ಬೋರಯ್ಯ, ವಿಷ್ಣು ಗುಂತಕೋಲಮ್ಮನಹಳ್ಳಿ, ಸಾಯಿಬಾಬಾ ತಿಪ್ಪೇಸ್ವಾಮಿ, ಪ್ರಹಲಾದ್, ನಾಗೇಂದ್ರಪ್ಪ, ರೇಖಲಗೆರೆ ತಿಪ್ಪೇಸ್ವಾಮಿ, ಇದ್ದರು.

About The Author

Namma Challakere Local News
error: Content is protected !!