ಚಳ್ಳಕೆರೆ : ಎರಡು ಸರ್ಕಾರಗಳು ರೈತರಿಗೆ ಸಬ್ಸಿಡಿ ಆಸೆ ತೋರಿಸಿ ರೈತರನ್ನು ಸೋಲಾರ್‌ ಕಂಪನಿಗೆ ವರ್ಗಾವಣೆ ಮಾಡಿರುವುದು
ಖಂಡನೀಯ ಮತ್ತು ಕೃಷಿ ಕ್ಷೇತ್ರವನ್ನು ಯಾವುದೇ ಕಾರಣಕ್ಕೆ ಕಾರ್ಪೋರೇಟ್ ಕಂಪನಿಗಳಿಗೆ ವರ್ಗಾವಣೆ ಮಾಡುವುದು ಅಪರಾಧ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಅವರು ನಗರದ ತಾಲೂಕು ಕಛೇರಿಯಲ್ಲಿ ಪ್ರತಿಭನೆಯ ಮೂಲಕ ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ನೀಡಿ ಒತ್ತಾಯಿಸಿದರು.

2022-23ನೇ ಸಾಲಿನಲ್ಲಿ ಇದ್ದಂತಹ ಆಕ್ರಮ-ಸಕ್ರಮದ ಕಾನೂನು ಅಡಿಯಲ್ಲಿ ರೈತರಿಗೆ ಕೊಡಬೇಕಾದ ಸೌಲತ್ತುಗಳನ್ನು
ಕೊಟ್ಟು ಮೊದಲಿನಂತೆ ಇರುವ ಕಾನೂನನ್ನು ಮುಂದುವರೆಸಿಕೊಂಡು ಹೋಗಬೇಕೆಂದು ರೈತರ ಒತ್ತಾಯಿಸಿದರು.

ಸರ್ಕಾರಗಳು ರೈತರಿಗೆ ಸಬ್ಸಿಡಿ ಆಸೆ ತೋರಿಸಿ ಪದೇ ಪದೇ ರೈತರಿಗೆ ಕಿರುಕುಳ
ಕೊಡುತ್ತಿರುವ ಕಾನೂನುಗಳನ್ನು ಜಾರಿಗೆ ತರುತ್ತಿರುವುದು ಖಂಡನೀಯ. ಏಕೆಂದರೆ ರೈತರು ವಿದ್ಯುತ್ತನ್ನು ತನ್ನ ಸ್ವಂತಕ್ಕಾಗಲಿ, ತನ್ನ
ಕುಟುಂಬಕ್ಕಾಗಲಿ ಬಳಸುತ್ತಿಲ್ಲ. ರೈತರು ಬಳಸುವಂತಹ ವಿದ್ಯುತ್ ದೇಶದ ಆಹಾರದ ಭದ್ರತೆಗಾಗಿ ಮತ್ತು ರಾಜ್ಯದಲ್ಲಿರುವ
ಕಾರ್ಖಾನೆಗಳನ್ನು ಚಾಲನೆ ಮಾಡಲು, ನಿರುದ್ಯೋಗಿಗಳಿಗೆ ಕೆಲಸ ಕೊಡಲು ಮತ್ತು ಹಕ್ಕಿ-ಪಕ್ಷಿ ಮತ್ತು ಪ್ರಾಣಿಗಳಿಗೆ ಸಹಕಾರಿಯಾಗಲು
ಹಾಗೂ ಈ ದೇಶದ ಅಭಿವೃದ್ಧಿಗಾಗಿ ಬಳಸುತ್ತಿದ್ದಾನೆ. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಸಹ
ರೈತರಿಗೆ ಇದುವರೆಗೂ ಕೊಡಬೇಕಾದಂತಹ ಸೌಲತ್ತುಗಳನ್ನು ಕೊಟ್ಟಿರುವುದಿಲ್ಲ. ಸರ್ಕಾರಗಳೇ ಮಾಡಬೇಕಾದ ಕೆಲಸಗಳನ್ನು ರೈತರೇ
ಸ್ವಂತ ಬಂಡವಾಳದಿಂದ ಸುಮಾರು 32 ಲಕ್ಷ ಬೋರ್‌ವಲ್‌ಗಳನ್ನು ಕೊರೆದು ಆಹಾರದ ಭದ್ರತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ.
ನಮ್ಮನ್ನಾಳಿದ ಎಲ್ಲಾ ರಾಜಕಾರಣಿಗಳು ಚುನಾವಣೆಗೆ ಮುಂಚಿತವಾಗಿ ಕೊಟ್ಟಂತಹ ಆಶ್ವಾಸನೆಗಳನ್ನು ಇದೂವರೆಗೂ ಜಾರಿ ಮಾಡದೇ
ಮೋಸ ಮಾಡುತ್ತಿದ್ದಾರೆ. ಆದ್ದರಿಂದ ರೈತರ 3 ಕೃಷಿ ಕಾಯಿದೆಗಳು ರದ್ದಾಗಬೇಕು ಮತ್ತು ಡಾ|| ಸ್ವಾಮಿನಾಥನ್ ವರದಿಯನ್ನು ಆದರಿಸಿ
ರೈತರಿಗೆ M.S.P. ಜಾರಿಯಾಗುವವರೆಗೆ ರೈತರಿಗೆ ಕೊಟ್ಟಿರುವಂತಹ ಯಾವುದೇ ಕಾನೂನುಗಳನ್ನು ಬದಲಾವಣೆ ಮಾಡುವಂತಿಲ್ಲ.

ಈಗ
ರೈತರು ಬಳಸುವ ವಿದ್ಯುತ್‌ ಆದು ಆಕ್ರಮವಲ್ಲ, ಅದು ಯಾವತ್ತಿಗೂ ಸಕ್ರಮ ಆದ್ದರಿಂದ ಯಾವುದೇ ಕಾರಣಕ್ಕೂ ರೈತರು ಬಳಸುವ ಕೃಷಿ
ಪಂಪ್‌ಸೆಟ್‌ಗಳ ವಿದ್ಯುತ್ತನ್ನು ಕಟ್ ಮಾಡಬಾರದು. ಇದನ್ನು ಏನಾದರೂ ಉಲ್ಲಂಘನೆ ಮಾಡಿ ಮುಂದುವರೆದರೆ ರೈತರು ತಾಳ್ಮೆಯನ್ನು
ಕಳೆದುಕೊಂಡು ಹೋರಾಟಕ್ಕೆ ದುಮಿಕಿದರೆ ಹೋರಾಟದಲ್ಲಿ ಏನಾದರೂ ಕಷ್ಟನಷ್ಟಗಳು ಮತ್ತು ಮಾನ ಹಾನಿ, ಪ್ರಾಣಹಾನಿಯಾಗಲಿ
ಆದಲ್ಲಿ ಆಳುವ ಸರ್ಕಾರಗಳೇ ಹೋಣೆಗಾರರಾಗಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸರ್ಕಾರಗಳನ್ನು
ಎಚ್ಚರಿಸುತ್ತದೆ.

ಇದನ್ನೇನಾದರು ಸರ್ಕಾರಗಳು ಉಲ್ಲಂಘಿಸಿದರೆ ರಾಜ್ಯ ಸಮಿತಿಯ ಆದೇಶದ ಮೇರೆಗೆ ಇಡೀ ರಾಜ್ಯಾದ್ಯಂತ
ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಸರ್ಕಾರಗಳಿಗೆ ಎಚ್ಚರಿಕೆಯನ್ನು ನೀಡಿದರು.

ಇದೇ ಸಂಧರ್ಭದಲ್ಲಿ ತಿಪ್ಪೇಸ್ವಾಮಿ ರಾಜಣ್ಣ, ಪಾಲಮ್ಮ, ಮಲ್ಲಿಕಾರ್ಜುನ, ಇತರರು ಇದ್ದರು.

About The Author

Namma Challakere Local News
error: Content is protected !!