ಚಳ್ಳಕೆರೆ :
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ ಸಂಘದ ಸದಸ್ಯರಿಗೆ ಸದಸ್ಯತ್ವ ಕಾರ್ಡನ್ನು ವಿತರಿಸಲಾಯಿತು.
ಅವರು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಿಗೆ ಸದಸ್ಯತ್ವದ ಕಾರ್ಡನ್ನು ವಿತರಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಜಿಲ್ಲಾಧ್ಯಕ್ಷರಾದ ಅನಂತ್ ಮೂರ್ತಿ ನಾಯಕ್ ಅವರು, ಪತ್ರಕರ್ತರ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ಸಂಘ ನಿಮ್ಮ ಜೊತೆಯಲ್ಲಿ ಇರುತ್ತದೆ, ಪತ್ರಕರ್ತರ ಬಸ್ ಪಾಸ್ ವಿತರಣೆ, ಪತ್ರಕರ್ತರ ಆರೋಗ್ಯ ವಿಮೆ, ಹೀಗೆ ಎಲ್ಲಾ ಹಂತದಲ್ಲಿ ಪತ್ರಕರ್ತರಿಗೆ ಸಿಗುವಂತಹ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ನಿರಂತರವಾಗಿ ಶ್ರಮಿಸುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ಆರ್. ದ್ಯಾಮರಾಜು, ಗೌರವಾಧ್ಯಕ್ಷರಾದ ಡಿ ವೀರಣ್ಣ, ತಾಲೂಕು ಅಧ್ಯಕ್ಷರಾದ ಜಾಲಿ ಮಂಜು, ನಿರ್ದೇಶಕರಾದ ಹೊನ್ನೂರು ಮಾರಣ್ಣ, ಜಿ ಆರ್ ತಿಪ್ಪೇಸ್ವಾಮಿ, ವಿಜಯಕುಮಾರ್, ಲೋಕೇಶ್, ಈ ನಾಗರಾಜ್, ಸಿ ಶ್ರೀನಿವಾಸ್, ಟಿ ಮಂಜುನಾಥ್, ನಗರಂಗೆರೆ ರಾಜು, ದೇವರಹಳ್ಳಿ ರಾಜಣ್ಣ, ಗೌರಿಪುರ ಬಸವರಾಜ್, ಕುದಾಪುರ ತಿಪ್ಪೇಸ್ವಾಮಿ, ಹಾಗೂ ಡಿ ನಿಂಗರಾಜ್ ಇತರರು ಇದ್ದರು.


