ನಲಗೇತನಹಟ್ಟಿಯಲ್ಲಿ ಜಾತಿ ಸಮೀಕ್ಷೆಗೆ ಚಾಲನೆ ನೀಡಿದ ಗ್ರಾ.ಪಂ. ಮಾಜಿ ಅಧ್ಯಕ್ಷೆ.ಹಾಲಿ. ಸದಸ್ಯನಿ ಬೋರಮ್ಮ.

ನಾಯಕನಹಟ್ಟಿ : ಗ್ರಾಮದ ಮಾದಿಗ ಸಮುದಾಯದ ಬಂಧುಗಳು ಒಳ ಮೀಸಲಾತಿ ಗಾಗಿ ಮಾದಿಗ ಎಂದೇ ನಮೂದಿಸಿ ಎಂದು ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಲಿ ಸದಸ್ಯನಿ ಬೋರಮ್ಮ ಹೇಳಿದರು.

ಮಂಗಳವಾರ ಹೋಬಳಿಯ ನಲಗೇತನಹಟ್ಟಿ ಗ್ರಾಮದ ಎ.ಕೆ.ಕಾಲೋನಿಯಲ್ಲಿ ದತ್ತಾಂಶ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ.ಅವರು ಸಮಾನತೆ ಮತ್ತು ಸಾಮಾಜಿಕ ನ್ಯಾಯ ಎಲ್ಲ ವರ್ಗದವರಿಗೆ ಎಲ್ಲಾ ಕಾಲದಲ್ಲಿಯೂ ನೀಡುವುದು ಸರ್ಕಾರದ ಉದ್ದೇಶವಾಗಿದೆ ಆದ್ದರಿಂದ ಗ್ರಾಮದ ಮಾದಿಗ ಜನಾಂಗದವರು ಜಾತಿ ಕಾಲಂ 61 ರಲ್ಲಿ ಮಾದಿಗ ಎಂದೇ ಬರೆಯಿಸುವಂತೆ ಮನವಿ ಮಾಡಿದರು.

ಇದೇ ವೇಳೆ ಶಿಕ್ಷಕ ಕೆ.ಸಿ. ಮಹಾಂತೇಶ್ ಮಾತನಾಡಿದರು ಪರಿಶಿಷ್ಟ ಜಾತಿ ಸಮೀಕ್ಷೆ 2025ರ ಸರ್ಕಾರದ ಆದೇಶದಂತೆ ನಲಗೇತನಹಟ್ಟಿ ಗ್ರಾಮದ ಎ.ಕೆ.ಕಾಲೋನಿಯಲ್ಲಿ ಮೇ 5 ರಿಂದ ಜಾತಿ ಸಮೀಕ್ಷೆ ಪ್ರಾರಂಭಿಸಲಾಗಿದೆ ಸಮೀಕ್ಷೆಗೆ ಸಹಕಾರ ನೀಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಶಿಕ್ಷಕ ಒ. ಲೋಕೇಶ್ ಮಾತನಾಡಿದರು.

ಇದೆ ವೇಳೆ ನಲಗೇತನಹಟ್ಟಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಹಾಲಿ. ಸದಸ್ಯನಿ ಬೋರಮ್ಮ, ಹಟ್ಟಿಯ ಯಜಮಾನ ಕಾಳೇ ಕ್ಯಾಸಯ್ಯ, ಗ್ರಾಮಸ್ಥರಾದ ಬಂಗಾರಿ ಚನ್ನಯ್ಯ, ಬೋರಯ್ಯ, ಕೆಂಚಮ್ಮ ಎಂ.ಬಿ. ಸಣ್ಣ ಬೋರಯ್ಯ, ಕೆ. ಟಿ .ರುದ್ರಮನಿ,ಇದ್ದರು.

About The Author

Namma Challakere Local News
error: Content is protected !!