“ಉತ್ತಮ ಸಾಧನೆಗೆ ಸಕಾರಾತ್ಮಕ ಆಲೋಚನೆಯೇ ಆಧಾರ”-ಡಾ.ಭೂಮಿಕ ಅನಿಸಿಕೆ.

ಚಳ್ಳಕೆರೆ:-ಜೀವನದಲ್ಲಿ ಉತ್ತಮ ಸಾಧನೆಗೆ ಸಕಾರಾತ್ಮಕ ಆಲೋಚನೆಯೇ ಆಧಾರವಾಗಿರುತ್ತದೆ ಎಂದು‌ ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕಿ ಡಾ.ಭೂಮಿಕ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ” ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಶಕ್ತಿಯೇ ಜೀವನ-ದೌರ್ಬಲ್ಯವೇ ಮರಣ” ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ಈ ಕಾರ್ಯಕ್ರಮದ ಪ್ರಯುಕ್ತ ಕನಕಪುರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ಜ್ಯೋತ್ಸ್ನಾಮಯೀ ಅವರು ವಿದ್ಯಾರ್ಥಿಗಳಿಗೆ ಭಜನೆ ಮತ್ತು ವೇದಮಂತ್ರಗಳನ್ನು ಹೇಳಿಕೊಟ್ಟರು. ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಧ್ಯಾನಾಭ್ಯಾಸ ಮಾಡಿಸಿದರು.

ಈ ಯುವ ತರಗತಿಯಲ್ಲಿ ಯತೀಶ್ ಎಂ ಸಿದ್ದಾಪುರ, ಜಿ.ಯಶೋಧಾ ಪ್ರಕಾಶ್,ಪಂಕಜ, ಅಶ್ವಿನಿ, ಸಂತೋಷ್,ಸಂಜನ, ಋತಿಕ್, ಅಂಬಣ್ಣ, ಮೌರ್ಯ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

About The Author

Namma Challakere Local News
error: Content is protected !!