.ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಸಂಭ್ರಮದ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ. ತೆರೆದ ವಾಹನ ಬೆಳ್ಳಿರಥದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಡಿಜೆ ಸೌಂಡ್ಗೆ ಸಖತ್ ಸ್ಟಾಪ್ ಹಾಕಿದ ಯುವಕರು

ನಾಯಕನಹಟ್ಟಿ:: ಗ್ರಾಮದ ಪ್ರತಿಯೊಬ್ಬರು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯನಿ ಬಸಕ್ಕ ತಿಪ್ಪೇಸ್ವಾಮಿ ಹೇಳಿದರು.

ಮಂಗಳವಾರ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ 134 ನೇ ಜಯಂತಿಯ ಆಚರಣೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಬೆಳ್ಳಿ ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು ಸಂವಿಧಾನ ಶಿಲ್ಪಿ ಡಾ
ಬಿ.ಆರ್. ಅಂಬೇಡ್ಕರ್ ಅವರು ಇಂದು ಮಹಿಳೆಯರಿಗೆ ಅಧಿಕಾರ ಸಿಕ್ಕಿದೆ ನಾವೆಲ್ಲ ರಾಜಕೀಯವಾಗಿ ಬೆಳೆಯಲು ಅಂಬೇಡ್ಕರ್ ಮತ್ತು ಅವರ ಬರೆದ ಸಂವಿಧಾನ ಎಂದು ಗ್ರಾಮ ಪಂಚಾಯಿತಿ ಸದಸ್ಯನಿ ಬಸಕ್ಕ ತಿಪ್ಪೇಸ್ವಾಮಿ ತಿಳಿಸಿದರು.

ಇದೆ ವೇಳೆ ಗ್ರಾಮದ ಮುಖಂಡ ಶಂಕರ್ ಮೂರ್ತಿ ಮಾತನಾಡಿದರು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಶೋಷಿತಾ ಸಮುದಾಯಗಳಿಗೆ ಮೀಸಲಾತಿ ಸಾಮಾಜಿಕ ನ್ಯಾಯ ಮಹಿಳೆಯರಿಗೆ ಸಮಾನತೆ, ದುರ್ಬಲ ವರ್ಗದವರಿಗೆ ಶೈಕ್ಷಣಿಕ ಹಾರ್ದಿಕ ಬಲ ನೀಡಲು ಕಾರಣರಾಗಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಎಸ್. ಮಂಜಣ್ಣ, ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯ ಪಾಲಮ್ಮ ಜಿ. ಬೋರಯ್ಯ, ಸದಸ್ಯರಾದ ಪ್ರೇಮಲತಾ ಶಂಕರ್ ಮೂರ್ತಿ, ಬಸಕ್ಕ ತಿಪ್ಪೇಸ್ವಾಮಿ, ಗ್ರಾಮಸ್ಥ ಜಿ.ಎಸ್. ತಿಪ್ಪೇಸ್ವಾಮಿ ,
ಎ.ಕೆ ಕಾಲೋನಿಯ ಮುಖಂಡರಾದ ಜಿ.ಜೆ. ಬಸವರಾಜ್,ಜಿ.ಆರ್. ಮಲ್ಲೇಶ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜಿ.ಬಿ. ತಿಪ್ಪೇಸ್ವಾಮಿ,ಜಿ. ಎಂ. ನಾಗರಾಜ್, ಜಿ.ಎನ್, ಪುಟ್ನಂಜ, ಚಂದ್ರಣ್ಣ, ಕೆ. ಪಿ. ಮಲ್ಲೇಶ್ ,ರಂಗಪ್ಪ, ಡಿಎಸ್ಎಸ್ ಸಂಚಾಲಕ ಡಿ.ಕೊಲ್ಲಾರಪ್ಪ, ನಿಂಗಪ್ಪ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಸಂಚಾಲಕರು ಸದಸ್ಯರು ಹಾಗೂ ಸಮಸ್ತ ಗಜ್ಜುಗಾನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!