ಚಳ್ಳಕೆರೆ :

ಎನ್ ದೇವರಹಳ್ಳಿ ದಡ್ಲು ಮಾರಮ್ಮದೇವಿಗೆ ದ್ವಾರಬಾಗಿಲು ಭೂಮಿ ಪೂಜೆಗೆ ಚಾಲನೆ ನೀಡಿದ ಗ್ರಾ.ಪಂ.ಅಧ್ಯಕ್ಷೆ ಸರಿತಬಾಯಿ ರಾಜನಾಯ್ಕ.

ನಾಯಕನಹಟ್ಟಿ:: ಬುಡಕಟ್ಟು ಜನರ ಆರಾಧ್ಯ ದೇವತೆ ಶ್ರೀ ದೊಡ್ಡ ಮಾರಮ್ಮ ದೇವಸ್ಥಾನದ ಆವರಣದಲ್ಲಿ ಬುಧವಾರ ದ್ವಾರ ಬಾಗಿಲು ಭೂಮಿ ಪೂಜೆ ನೆರವೇರಿಸಲಾಯಿತು.

ಇದೆ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಸರಿತಬಾಯಿ ರಾಜನಾಯ್ಕ ಮಾತನಾಡಿದರು. ದೊಡ್ಡು ಮಾರಿದೇವಿ ಬುಡಕಟ್ಟು ಜನರ ಆರಾಧ್ಯ ದೇವತೆಯಾಗಿ ಈ ಭಾಗದ ಲಕ್ಷಾಂತರ ಭಕ್ತರ ದೇವತೆಯಾಗಿದ್ದಾಳೆ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಇಂದು ದ್ವಾರಬಾಗಿಲ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ ಎಂದರು.

ಇದೇ ವೇಳೆ ಹಾಲು ಉತ್ಪಾದಕ ಸಂಘದ ಮಾಜಿ ಅಧ್ಯಕ್ಷ ಎಂ.ಜಿ. ಮಲ್ಲಿಕಾರ್ಜುನ್ ಮಾತನಾಡಿದರು ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂಥ ಶ್ರೀ ದೊಡ್ಲ ಮಾರಿಕಾಂಬ ದ್ವಾರಬಾಗಿಲು ಭೂಮಿ ಪೂಜೆಯನ್ನು ಗ್ರಾಮ ಪಂಚಾಯತಿ ಪಿಡಿಒ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಗ್ರಾಮಸ್ಥರು ಎಂದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸುಮಾ ಸುಭಾಷ್, ಸದಸ್ಯರಾದ ಆರ್. ಬಸವರಾಜ್, ರಾಯಮ್ಮ, ರತ್ನಮ್ಮ,ಎಸ್ ಸಿದ್ದಪ್ಪ, ಪಿಡಿಒ ಕೆ. ಶಶಿಕಲಾ, ಗ್ರಾಮ ಪಂಚಾಯತಿ ದ್ವಿತೀಯ ದರ್ಜೆ ಸಹಾಯಕ ಎನ್. ಬಿ. ವೀರನಾಯಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ ಬಾಬು, ನಿರ್ದೇಶಕ ಎಚ್ ನಾಗರಾಜ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಸ್. ಮಲ್ಲಣ್ಣ, ಗ್ರಾಮಸ್ಥರಾದ ಬಿ. ಕಲ್ಯಾಣ್ ಕುಮಾರ್ ,ಲಚ್ಚನಾಯ್ಕ, ಸಿದ್ದೇಶ್, ಡ್ರೈವರ್ ತಿಪ್ಪೇಸ್ವಾಮಿ, ಮಾಜಿ ತಾಲೂಕು ಪಂಚಾಯತಿ ಸದಸ್ಯ ತಿಪ್ಪೇಸ್ವಾಮಿ, ಎಸ್ ಸಿದ್ದೇಶ್, ಕೆ ಎಸ್ ದಿವಾಕರ್ ರೆಡ್ಡಿ, ಪಿ ಬಿ ರುದ್ರಣ್ಣ, ನೀರಾವರಿ ಹೋರಾಟ ಸಾಹಿತ್ಯ ಹೋಬಳಿ ಅಧ್ಯಕ್ಷ ಜಿ.ಬಿ. ಮುದಿಯಪ್ಪ, ಕೊಂಡಯ್ಯನ ಕೊಪಿಲೆ ಬೋರಣ್ಣ, ಹಾಗೂ ಊರಿನ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!