ಚಳ್ಳಕೆರೆ :
ನಾಗಮೋಹನ್ ದಾಸ್ ಸಮಿತಿಯವರ ಪರಿಶಿಷ್ಟ ಜಾತಿಗಳಲ್ಲಿನ
ಒಳ ಮೀಸಲಾತಿಗಾಗಿ ಜಾತಿ ಸಮೀಕ್ಷೆಯು ದಿನಾಂಕ 5.05.2025 ರಿಂದ 17.5. 2025 ರವರೆಗೆ ನಡೆಯುವ ಹಿನ್ನೆಯಲ್ಲಿ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಾಲೆನಹಳ್ಳಿ ಗ್ರಾಮದ ಮಾದಿಗ ಕಾಲೋನಿಗಳಿಗೆ ಮಾದಿಗ ಸಮುದಾಯದ ಮುಖಂಡರು
ಭೇಟಿ ನೀಡಿ ಮಾದಿಗ ಜಾತಿಯ ಕ್ರಮ ಸಂಖ್ಯೆ 61ಮಾದಿಗ ಎಂದು ನಮೂದಿಸುವ ಮೂಲಕ ಬಹು ಸಂಖ್ಯಾತ ಮಾದಿಗರ ಬಹುದಿನದ ಬೇಡಿಕೆಯ ಹೋರಾಟದ ಫಲಕ್ಕಾಗಿ ನಡೆಯುವ ಸಮೀಕ್ಷೆ ಬಗ್ಗೆ ಜಾಗೃತಿರಾಗಬೇಕು ಎಂದು ಮಾದಿಗ ಸಮುದಾಯದ ಮುಖಂಡರು ಕರೆ ನೀಡಿದ್ದಾರೆ.
ಚಳ್ಳಕೆರೆ ತಾಲ್ಲೂಕ್ ಮಾದಿಗ ಗುತ್ತಿಗೆದಾರರ ಸಂಘದ ವತಿಯಿಂದ ಹಾಗೂ ಮಾದಿಗ ಸಮುದಾಯದ ಮುಖಂಡರುಗಳಾದ ತಿಪ್ಪೆರುದ್ರಪ್ಪ ಇಂಜಿನಿಯರ್, ಜಗದೀಶ್ ನಗರಂಗೆರೆ, ನನ್ನಿವಾಳ ನಾಗರಾಜ್,ದುರುಗೇಶ್ ಹೊಟ್ಟೆಪನಹಳ್ಳಿ ಶಿಕ್ಷಕರು, ರಂಗಸ್ವಾಮಿ(ಮನುಶ್ರೀ) ದೊಡ್ಡೇರಿಸುರೇಶ, ಡಿ. ಲಕ್ಷ್ಮಣ ಚಳ್ಳಕೆರೆ, ನಾಗರಾಜ್ ನಗರಂಗೆರೆ ದ್ಯಾವರನಹಳ್ಳಿ ಆನಂದಕುಮಾರ,ಚೌಳೂರು ಪ್ರಕಾಶ್ ಕಾಲೋನಿಗಳಲ್ಲಿ ಚಾರಿಸಿ ಜಾಗೃತಿ ಮೂಡಿಸಿದ್ದಾರೆ.

