ಚಳ್ಳಕೆರೆ :
ಟಾಟಾ ಏಸು ಟೈರ್ ಸ್ಫೋಟ ಆಟೋಗೆ ಡಿಕ್ಕಿ ನಾಲ್ವರಿಗೆ ಗಾಯ.
ಚಲಿಸುತ್ತಿದ್ದ ಟಾಟಾಏಸು ವಾಹನದ ಟೈರ್ ಸ್ಪೋಟಗೊಂಡು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಗರದ ಬಳ್ಳಾರಿ ರಸ್ತೆಯಲ್ಲಿ ನಡೆದಿದೆ.
ಬಳ್ಳಾರಿ ರಸ್ತೆ ಮಾರ್ಗವಾಗಿ ಬರುತ್ತಿದ್ದ ಟಾಟಾ ಏಸ ವಾಹನದ ಟೈರ್ ಸ್ಫೋಟ ಗೊಂಡು ಮುಂದೆ ಬರುತ್ತಿದ್ದ ಆಟೋ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಆಟೋರಿಕ್ಷ ಮೂರು ಪಲ್ಟಿ ಯಾಗಿದ್ದು ಆಟೋ ಚಾಲಕ ಸೇರಿದಂತೆ ನಾಲ್ಕು ಜನರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡು ವಾಹನದ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

