ಚಳ್ಳಕೆರೆ :
ಚಳ್ಳಕೆರೆ: ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ
ಪ್ರತಿಭಟನೆ
ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಚಳ್ಳಕೆರೆ
ನಗರದ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಪಶ್ಚಿಮ
ಬಂಗಾಳ ಹಾಗೂ ಕಾಶ್ಮೀರದಲ್ಲಿ ನಡೆದ ಅಮಾಯಕ ಹಿಂದೂಗಳ
ಹತ್ಯೆಯನ್ನು ವಿರೋಧಿಸಿ ಚಳ್ಳಕೆರೆಯಲ್ಲಿ “ಬೃಹತ್ ಪ್ರತಿಭಟನಾ
ಮೆರವಣಿಗೆ” ಮಾಡಲಾಯಿತು.
ವಾಲ್ಮೀಕಿ ವೃತ್ತದಿಂದ ನೆಹರು
ವೃತ್ತದ ವರೆಗೆ ನೂರಾರು ಜನ ಹಿಂದೂಪರ ಘೋಷಣೆಗಳನ್ನು
ಕೂಗುತ್ತಾ ನೆಹರು ವೃತ್ತದಲ್ಲಿ ‘ಹುತಾತ್ಮರಾದ ಹಿಂದೂ
ಬಾಂಧವರಿಗೆ’ ಪುಷ್ಪ ಮತ್ತು ದೀಪಗಳನ್ನು ಸಮರ್ಪಿಸುವ ಮೂಲಕ
ಶ್ರದ್ಧಾಂಜಲಿಗಳನ್ನು ಸಮರ್ಪಿಸಿದರು.

