ಚಳ್ಳಕೆರೆ :
ಹೊಳಲ್ಕೆರೆ: ಸಿಂಧುತ್ವ ನೀಡಲು ಲಂಚ: 7 ವರ್ಷ ಶಿಕ್ಷೆ
ಸಿಂಧುತ್ವ ಪ್ರಮಾಣ ಪತ್ರಕ್ಕೆ 500 ಲಂಚ ಪಡೆದ ಆರೋಪಿ
ಆರ್ ಐ ಮಂಜಣ್ಣನಿಗೆ ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ
ನ್ಯಾಯಾಲಯದ ನ್ಯಾಯಾಧೀಶರಾದ ರೋಣ್ ವಾಸುದೇವ್
ಇಂದು 7 ವರ್ಷ ಶಿಕ್ಷೆ ವಿಧಿಸಿದ್ದಾರೆ.
ಹೊಳಲ್ಕೆರೆ ಆರ್ ಐ ಮಂಜಣ್ಣ,
ರಘು ಎಂಬ ವ್ಯಕ್ತಿಗೆ ಪೊಲೀಸ್ ಕೆಲಸ ಸಿಕ್ಕ ಹಿನ್ನೆಲೆ ಸಿಂಧುತ್ವ
ಪ್ರಮಾಣ ಪತ್ರ ನೀಡಲು, 2018ರಲ್ಲಿ 500 ಲಂಚ ಪಡೆದಿದ್ದು, ಎಸಿಬಿ
ಪೊಲೀಸರು ದೂರು ದಾಖಲಿಸಿ, ಕೋರ್ಟ್ ಗೆ ವರದಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದಾರೆ.

