ಚಳ್ಳಕೆರೆ :
ಬಯಲು ಸೀಮೆಯ ಜನರಿಗೆ ನೀರುಣಿಸುವ ಮಹತ್ವಕಾಕ್ಷಿ ಯೋಜನೆ ಅಮೃತ್ ಯೋಜನೆ ಇದಾಗಿದೆ ಸುಮಾರು 28.8 ಕೋಟಿ ವೆಚ್ಚದಲ್ಲಿ ಕಾಮಗಾರಿ ಚಾಲನೆಯಲ್ಲಿದೆ ಎಂದು ಹಿರಿಯೂರಿನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆರ್.ಅನಿಲ್ ಕುಮಾರ್ ಹೇಳಿದರು.
ಅವರು ನಗರದ ನಗರಸಭೆಯ ತುರ್ತು ಸಭೆಯಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ನಗರಸಭೆ ವ್ಯಾಪ್ತಿಯ ಜನರಿಗೆ ಕುಡಿಯುವ ನೀರು ಹೊದಗಿಸಲು ಅಮೃತ್ ಯೋಜನೆ ವರದಾನವಾಗಿದೆ.
ಕಳೆದ
ಹತ್ತು ವರ್ಷಗಳ ಹಿಂದೆ ಅನುಮೊದನೆ ಗೊಂಡ ಲೇಔಟ್ ಗಳಿಗೆ ಪೈಪ್ ಲೈನ್ , ಓವರ್ ಹೆಡ್ ಟ್ಯಾಂಕ್ ನಿರ್ಮಾಣ,ಮನೆಗಳಿಗೆ ನಲ್ಲಿ ಸಂಪರ್ಕ ಈಗೇ ಎಲ್ಲಾ ಕಾಮಗಾರಿಯನ್ನು
ಒಂದು ವರ್ಷದ ಒಳಗೆ ಮುಗಿಸುವ ಯೋಜನೆ ಹಮ್ಮಿಕೊಳ್ಳಾಗಿದೆ.
ನಗರದಲ್ಲಿ ಸುಮಾರು 63 ಕಿ.ಮೀ ಉದ್ದದ ಪೈಪ್ ಲೈನ್ ಮಾಡಲಾಗುತ್ತದೆ, ಎಲ್ಲಾ ಶಾಲಾ ಕಾಲೇಜು, ಅಂಗನವಾಡಿ, ಹಾಸ್ಟೆಲ್ ಗಳು ನಗರಸಭೆ ಹಲವು ವಾರ್ಡ್ ಗಳಿಗೆ ಈ ಯೋಜನೆ ಉಪಯೋಗ ವಾಗಲಿದೆ.
ನಗರಸಭೆ ವ್ಯಾಪ್ತಿಯ ಸುಮಾರು
ಐದು ಸಾವಿರ ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಗುತ್ತದೆ ಎಂದರು.
ಇನ್ನೂ ನಗರಕ್ಕೆ ಅವಶ್ಯವಾದ
ಯುಜಿಡಿ ಗೆ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹಿತಸಕ್ತಿ ಮೇರೆಗೆ ಸುಮಾರು 253 ಕೋಟಿ ವೆಚ್ಚಕ್ಕೆ
ಪ್ರಸ್ತಾವನೆಯನ್ನು
ಸರಕಾರಕ್ಕೆ ಕಳಿಸಲಾಗಿದೆ.
2016 ರಲ್ಲಿ ನಗರದ ಜನತೆಗೆ ಕುಡಿಯುವ ನೀರಿಗಾಗಿ ಪರಿತಪ್ಪಿಸುವ ಕಾಲ ಒಂದಿತ್ತು ಕೇವಲ ಕೊಳವೆ ಬಾವಿಯ ನೀರು ಅವಲಂಬಿಸಿ ನೀರು ಕುಡಿಯಬೇಕಿತ್ತು ಆದರೆ
ವಾಣಿ ವಿಲಾಸ ಸಾಗರದ ನೀರು 2016 ರ ಲ್ಲಿ ಬಂದ ಮೇಲೆ ಚಳ್ಳಕೆರೆ ಜನತೆಯ ನೀರಿನ ದಾಹ ತೀರಿಸಿದಂತಾಗಿದೆ ಎಂದಿದ್ದಾರೆ.


