“ಯುವಶಕ್ತಿಯ ರಹಸ್ಯ ಬ್ರಹ್ಮಚರ್ಯ ಜೀವನ”- ಯತೀಶ್ ಎಂ ಸಿದ್ದಾಪುರ

ಚಳ್ಳಕೆರೆ-ಯುವಶಕ್ತಿಯ ರಹಸ್ಯ ಬ್ರಹ್ಮಚರ್ಯ ಜೀವನವಾಗಿರುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಬಾಪೂಜಿ ಆಯುರ್ವೇದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ಪ್ರಾತಃ ಸ್ಮರಣೀಯ‌ ಬ್ರಹ್ಮರತ್ನಮಾಲಾ ಸ್ತೋತ್ರ”ದ ಅರ್ಥ ವಿವರಣೆಯನ್ನು ನೀಡಿದರು.ಸುಭದ್ರ ವ್ಯಕ್ತಿತ್ವದ ನಿರ್ಮಾಣಕ್ಕೆ ಬ್ರಹ್ಮಚರ್ಯವೇ ಆಧಾರಸ್ತಂಭವಾಗಿದ್ದು ಇದರ ನಿತ್ಯಾನುಷ್ಠಾನದಿಂದ ಅನೇಕ ಪ್ರಯೋಜನಗಳಿದ್ದು ಇದರ ಅನುಸರಣೆ ಅಗತ್ಯ ಎಂದರು.

ಈ ಉಪನ್ಯಾಸದ ಆರಂಭದಲ್ಲಿ ಭಜನೆಯನ್ನು ಯತೀಶ್ ಎಂ ಸಿದ್ದಾಪುರ ನಡೆಸಿಕೊಟ್ಟರೆ, ಮಾತಾಜೀ ತ್ಯಾಗಮಯೀ ಅವರು ವಿದ್ಯಾರ್ಥಿಗಳಿಗೆ ಧ್ಯಾನಾಭ್ಯಾಸ ಮಾಡಿಸಿದರು.ಈ ಕಾರ್ಯಕ್ರಮದಲ್ಲಿ ಡಾ.ಭೂಮಿಕ, ಸಂತೋಷ್, ಅಂಬಣ್ಣ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!