“ಸ್ವಾಮಿ ವಿವೇಕಾನಂದರ ಶಿಷ್ಯಪ್ರೇಮ ಅನಂತವಾದದ್ದು”- ಮಾತಾಜೀ ತ್ಯಾಗಮಯೀ ಅಭಿಪ್ರಾಯ.
ಚಳ್ಳಕೆರೆ-ಸ್ವಾಮಿ ವಿವೇಕಾನಂದರ ಶಿಷ್ಯಪ್ರೇಮ ಅನಂತವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ “ವಿಶ್ವಗುರು ಸ್ವಾಮಿ ವಿವೇಕಾನಂದ” ಪ್ರವಚನ ಮಾಲಿಕೆಯ ದಿವ್ಯ ಸಾನಿಧ್ಯ ವಹಿಸಿ ಅವರು ಸ್ವಾಮಿ ವಿವೇಕಾನಂದರ ಸಂನ್ಯಾಸಿ ಶಿಷ್ಯರ ಸ್ಮೃತಿಗಳ ಬಗ್ಗೆ ಪ್ರವಚನ ನೀಡಿದರು.
ಸತ್ಸಂಗದ ಆರಂಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು ಚಿರಂಜೀವಿ ವಿಕ್ರಮ್ ಮತ್ತು ದವನ್ ಅವರು ಪಠಿಸಿದರು.ಈ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ನಾಗೇಶ್ , ಶ್ರೀಮತಿ ಜಿ.ಯಶೋಧಾ ಪ್ರಕಾಶ್,ಸುಮನ ಕೋಟೇಶ್ವರ, ಅಂಬುಜಾ ಶಾಂತಕುಮಾರ್, ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ, ವೆಂಕಟೇಶ್, ನಾಗರಾಜ್, ಯತೀಶ್ ಎಂ ಸಿದ್ದಾಪುರ, ವನಜಾಕ್ಷಿ ಮೋಹನ್,ಪಂಕಜ ಚೆನ್ನಪ್ಪ, ಅಶ್ವಿನಿ,ಸಿ.ಎಸ್ ಭಾರತಿ,ಡಿ.ಕಾವೇರಿ ಸುರೇಶಯಾದವ್, ಗಾಯನ ಸೇರಿದಂತೆ ಇತರರಿದ್ದರು.

