ಚಳ್ಳಕೆರೆ :
ಚಳ್ಳಕೆರೆ: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರೈತ
ಸಂಘ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಚಳ್ಳಕೆರೆ
ತಹಶೀಲ್ದಾರ್ ಕಚೇರಿ ಬಳಿ ಇಂದು ರೈತ ಸಂಘಟನೆ ಪ್ರತಿಭಟನೆ
ನಡೆಸಿತು. ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ.
ರೈತರಿಗೆ ಮಾರಕವಾದ 3 ಕರಾಳ ಕಾಯ್ದೆ ಜಾರಿಗೆ ತಂದಿದ್ದು
ಅವುಗಳನ್ನು, ವಾಪಾಸ್ಸು ಪಡೆಯುತ್ತೇವೆಂದು ರಾಜ್ಯ ಸರ್ಕಾರ
ಹೇಳಿದ್ದು, ಅವುಗಳನ್ನು ಇದುವರೆಗೂ ವಾಪಸ್ ಪಡೆದಿಲ್ಲ. ರೈತರು
ಕೊಳವೆಬಾವಿ ಹಾಕಿಸಿಕೊಳ್ಳಲು ಮೊದಲು 7 ಲಕ್ಷ ರೂಪಾಯಿ
ಖರ್ಚು ಬರುತ್ತಿದೆ. ಸರ್ಕಾರ ಕೂಡಲೇ ವಾಪಸ್ ಪಡಿಬೇಕೆಂದು
ಒತ್ತಾಯಿಸಿದರು.