ಲಾರಿ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರನ ಸಾವು..
ಚಳ್ಳಕೆರೆ: ಚಲಿಸುತ್ತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳ ದಲ್ಲೆ ಸಾವನಪ್ಪಿದ್ದಾನೆ.
ಬೆಸ್ಕಾಂ ನೌಕರ ಅರುಣ್ ಕುಮಾರ್
ಚಳ್ಳಕೆರೆ ಯಿಂದ ಚಿತ್ರದುರ್ಗದ ಕಡೆ ಬೈಕ್ ನಲ್ಲಿ ಹೋಗುತ್ತಿದ್ದ ಚಳ್ಳಕೆರೆ ತಾಲ್ಲೂಕಿನ ಕುರುಡಿಳ್ಳಿ ಸಮೀಪ ಪುಣ್ಯ ಕೋಟಿ ಗೋಶಾಲೆ ಮುಭಾಗದ ಮುಖ್ಯರಸ್ತೆಯಲ್ಲಿ ಚಿತ್ರದುರ್ಗದ ಕಡೆಯಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಬೆಸ್ಕಾಂ ನೌಕರ ಅರುಣ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನಾ ಸ್ಥಳಕ್ಕೆ ಪಿಎಸ್ಐ ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..