ಚಳ್ಳಕೆರೆ : ತಾಲ್ಲೂಕು ಮತ್ಸಮುದ್ರ ಗ್ರಾಮದಲ್ಲಿ ಮೊದಲ ಬಾರಿಗೆ ಕೇಂದ್ರ ರೇಷ್ಮೆ ಮಂಡಳಿ ಹಾಗೂ ರಾಜ್ಯ ರೇಷ್ಮೆ ಇಲಾಖೆ ಸಿಲ್ಕ್ ಸಮಗ್ರ ಯೋಜನೆ ಅಡಿಯಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆ ಘಟಕವನ್ನು ಸ್ಥಾಪನೆ ಮಾಡಲಾಯಿತು.

ಚಿತ್ರದುರ್ಗ ಜಿಲ್ಲೆಯಲ್ಲಿ ಅತ್ಯಂತ ಗುಣಮಟ್ಟದ ರೇಷ್ಮೆ ಗೂಡು ಬೆಳೆಗಾರರು ಇದ್ದು ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಆಗುವಂತಹ ಅತ್ಯುತ್ತಮ ಗುಣಮಟ್ಟದ ರೇಷ್ಮೆ ಗೂಡು ಬೆಳೆಯುವುದು ನಮ್ಮ ಜಿಲ್ಲೆಯಲ್ಲೇ ಈ ಘಟಕ ನಮ್ಮ ಜಿಲ್ಲೆಯಲ್ಲೇ ಸ್ಥಾಪನೆ ಆಗಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳು ಸಿಗುತ್ತವೆ ಹಾಗೂ ರೇಷ್ಮೆ ಬೆಳೆಗಾರರು ಸಾಗಾಣಿಕೆ ವೆಚ್ಚ ಕಡಿಮೆ ಆಗುತ್ತದೆ.

ಈ ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ರೇಷ್ಮೆ ಮಂಡಳಿ ನಿವೃತ್ತ ವಿಜ್ಞಾನಿಗಳಾದ ಮಹದೇವಯ್ಯ , ರೇಷ್ಮೆ ಸಹಾಯಕ ನಿರ್ದೇಶಕ ಸಿ.ಡಿ ಉಷಾ, ರೇಷ್ಮೆ ಇಲಾಖೆ ಸೈಯದ್ ಸಲ್ಲಾವುದೀನ್, ರೇಷ್ಮೆ ವಿಸ್ತಾರಣಾಧಿಕಾರಿಗಳು ಪರುಶುರಾಂಪುರ ಚಲ್ಮೇಶ್.ಎ, ಮಾಲೀಕರು ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ಎನ್, ತಿಪ್ಪೇಸ್ವಾಮಿ, ಮಂಜುನಾಥ , ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Namma Challakere Local News
error: Content is protected !!