ಉದ್ಯಾನವನದಲ್ಲಿ ಎಲ್ಲಂದರಲ್ಲಿ ಕಸ ಹಾಕಿ ಪರಿಸರ ಹಾಳು ಮಾಡಬೇಡಿ…

ಚಳ್ಳಕೆರೆ :
ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದರಿಂದ ರೋಗಗಳು ನಮ್ಮಿಂದ ದೂರವಿಡಬಹುದು ಎಂದು ನವ ಉಲ್ಲಾಸ ಕಿಟ್ಟಿ ಸಂಘದ ಅಧ್ಕಕ್ಷೆ ಸೌಭಾಗ್ಯ ಶ್ರೀಕಾಂತ ಹೇಳಿದರು.

ಕಿತ್ತೂರು ರಾಣಿ ಚೆನ್ನಮ್ಮ ಸಂಘ, ನವ ಉಲ್ಲಾದ ಕಿಟ್ಡಿ ಸಂಘ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದ ಪದಾಧಿಕಾರಿಗಳು ನಗರದ ಹೊರಹೊಲಯದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ಪೇಪರ್ ಗುಟ್ಕದ ಕವರ್ ಕಸ- ಕಡ್ಡಿ ಆರಿಸಿ ಉದ್ಯಾನ ಸ್ವಚ್ಛಗೊಳಿಸಿವ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿ.

ನಮ್ಮ ದೇಹದ ಆರೋಗ್ಯಕರ ಸ್ಥಿತಿಯನ್ನು ಕಾಪಾಡಿಕೊಳ್ಳಲು ನಾವು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು.

ಆರೋಗ್ಯಕರ ಜೀವನವನ್ನು ಉತ್ತೇಜಿಸಲು ಸುತ್ತಮುತ್ತಲಿನ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮತ್ತೊಂದು ನಿಯತಾಂಕವಾಗಿದೆ. ಅಶುದ್ಧ ಪರಿಸರವು ರೋಗಕಾರಕಗಳನ್ನು ಆಹ್ವಾನಿಸುತ್ತದೆ.

ಈ ಪರಿಕಲ್ಪನೆಯು ಆರೋಗ್ಯಕರ ವಾತಾವರಣ ಸೃಷ್ಟಿಯಾಗಲು ನಮ್ಮ ಪರಿಸರವನ್ನು ಸ್ವಚ್ಛವಾಗಿಡಲು ಎಲ್ಲರೂ ಪ್ರಯತ್ನಿಸಬೇಕು . ನಾವು ಇಂದು ಉದ್ಯಾನವನದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದ್ದೇವೆ ಬರುವ ದಿನಗಳಲ್ಲಿ ಬಸ್ ನಿಲ್ದಾಣ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುತ್ತೇವೆ ಎಂದರು..

ನಿವೃತ್ತ ಶಿಕ್ಷಕಿ ಪುಷ್ಪಲತಾ ಮಾತನಾಡಿ.ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪೋಷಕರು ಮತ್ತು ಹಿರಿಯರು ನಿಮ್ಮ ಮೇಲೆ ಹೊರಿಸಿದ್ದ ಒಂದು ಅವಶ್ಯಕತೆಯಾಗಿದ್ದಿರಬಹುದು. ಆದರೆ ಈ ಸಾಮಾಜಿಕ ನಿರೀಕ್ಷೆಗಳನ್ನು ಮೀರಿ, ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿರಿಸುವುದು ನಿಮ್ಮ ಆಧ್ಯಾತ್ಮಿಕ ಬೆಳವಣಿಗೆಯ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಉದ್ಯಾನವನಕ್ಕೆ ಬರುವಂತಹ ವಿಹಾರಿಗಳು ಕಸವನ್ನ ಎಲ್ಲೆಂದರಲ್ಲಿ ಚೆಲ್ಲಿ ಪರಿಸರವನ್ನು ಹಾಳು ಮಾಡಬೇಡಿ ಎಂದರು…
ಈ ಸಂದರ್ಭದಲ್ಲಿ ಮೂರು ಸಂಘಗಳ ಪದಾಧಿಕಾರಿಗಳು ಇದ್ದರು..

About The Author

Namma Challakere Local News
error: Content is protected !!