ಚಳ್ಳಕೆರೆ : ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಡೆದ ಗ್ರಾಮ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ಆಗಮಿಸಿ ಆಶೀರ್ವಚನ ಮಾಡಿದ್ದಾರೆ.
ಗ್ರಾಮದ ದೇವಾಲಯಕ್ಕೆ ಭೇಟಿ ನೀಡಿ ಮುಖಂಡರೊಟ್ಟಿಗೆ ಮಾತನಾಡಿದ ಅವರು ಸ್ವಾಮೀಜಿಗಳು, ಗೋಹತ್ಯೆ ನಿಷೇಧ ಸಂಕಲ್ಪವನ್ನು ಮಾಡಿದ ಗ್ರಾಮದ ಎಲ್ಲಾ ವರ್ಗದ ಜನರಿಗೂ ಹಾಗೂ ಸೂರನಹಳ್ಳಿ ಗ್ರಾಮದ ಸುತ್ತಲಿನ 12 ಗ್ರಾಮಗಳ ಮುಖಂಡರುಗಳು,ಸಾರ್ವಜನಿಕರು, ಗೋ ಹತ್ಯೆ ನಿಷೇಧವನ್ನು ಸಂಕಲ್ಪ ಮಾಡಿರುವುದು ಸಂತಸದ ವಿಷಯ.
ಹಬ್ಬ ಹರಿದಿನ, ಜಾತ್ರೆಗಳ ನೆಪದಲ್ಲಿ ಗೋಹತ್ಯೆ ಮಾಡುವ ಪದ್ದತಿ ಕೈಬಿಡಬೇಕು, ಗೋವುಗಳನ್ನು ವಿಶೇಷ ಸ್ಥಾನಮಾನದಲ್ಲಿ ಕಾಣಬೇಕು .
ರೈತಪಿ ವರ್ಗ ಆರ್ಥಿಕವಾಗಿ ಮುಂದೆ ಬರಬೇಕು, ನಿಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಣದಲ್ಲಿ ಮುಂದುವರಿಯುವಂತೆ ಪ್ರೇರೇಪಿಸಬೇಕು ಹೀಗೆ ಇಂದಿನ ಸೂರನಹಳ್ಳಿ ಜಾತ್ರೆ ತಾಲೂಕಿಗೆ ಮಾದರಿಯಾಗಬೇಕು ಎಂದು ಸ್ವಾಮೀಜಿಗಳು ಆಶೀರ್ವಚನ ನುಡಿದಿದ್ದಾರೆ.
ಇದೇ ಸಂದರ್ಭದಲ್ಲಿ ಸೂರನಳ್ಳಿ ಗ್ರಾಮದ ಮಾಜಿ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಗ್ರಾಮದ ಮುಖಂಡರು, ಸಾರ್ವಜನಿಕರು ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.