ಸಡಗರಕ್ಕೆ ಸಾಕ್ಷಿಯಾದ ಕೊಲ್ಲಾಪುರದ ಮಹಾಲಕ್ಷ್ಮಿ ರಥೋತ್ಸವ.
ನಾಯಕನಹಟ್ಟಿ:: ಪಟ್ಟಣದ ಹೃದಯ ಬಾಗದಲ್ಲಿರುವ ಶ್ರೀ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ದಳವಾಯಿ ರುದ್ರಮುನಿ ಮಾತನಾಡಿ ಪಟ್ಟಣದ ಗ್ರಾಮದೇವತೆಯಾದಂತಹ ಕೊಲ್ಲಾಪುರದ ಮಹಾಲಕ್ಷ್ಮಿ ದೇವಿಯ ರಥೋತ್ಸವವನ್ನು ಪ್ರತಿವರ್ಷದಂತೆ ಯುಗಾದಿ ಹಬ್ಬದ ನಂತರ ಬರುವ ಶುಕ್ರವಾರದಂದು ರಥೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ. ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ ರಥೋತ್ಸವವನ್ನು ಜರುಗಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ, ದಳವಾಯಿ,ಎನ್, ಬಿ, ತಿಪ್ಪೇಸ್ವಾಮಿ, ಅರ್ಚಕ ಗುರುಸ್ವಾಮಿ, ಮಹಾಂತೇಶ್, ಸಂದೀಪ್, ಉಮೇಶ್, ಶಿವಣ್ಣ, ಕಾಳಾಚಾರಿ, ಸೇರಿದಂತೆ ಭಕ್ತಾದಿಗಳು ಇದ್ದರು.