ಚಳ್ಳಕೆರೆ :
ಚಿತ್ರದುರ್ಗ: ಸಂಸದ ಕಾರಜೋಳ ಭಾಷಣಕ್ಕೆ ಮಾದಿಗ
ಸಮುದಾಯ ಮುಖಂಡರ ಅಕ್ಷೇಪ
ಚಿತ್ರದುರ್ಗ ಜಿಲ್ಲಾಡಳಿತದಿಂದ ಬಾಬು ಜಗಜೀವನ್ ರಾಂ ರ
ಜಯಂತಿಯನ್ನಿಂದು ತರಾಸು ರಂಗ ಮಂದಿರದಲ್ಲಿ ಆಚರಿಸಿತು.
ಇದೇ ವೇಳೆ ಸಂಸದ ಗೋವಿಂದ ಕಾರಜೋಳ ಮಾತಾಡಿ, ಒಳ
ಮೀಸಲಾತಿ ಜಾರಿಗೆ ಕೇಂದ್ರಕ್ಕೆ ಆರ್ ಎಸ್ ಎಸ್ ನ ಮೋಹನ್
ಭಾಗವತ್ ಶಿಫಾರಸ್ಸು ಮಾಡಿದ್ದರು, ಎಂದು ಹೇಳುತ್ತಿದ್ದಂತೆ
ಮಾದಿಗ ಸಮುದಾಯದ ಮುಖಂಡರು ಸಂಸದರ ಭಾಷಣಕ್ಕೆ
ಅಡ್ಡಿಪಡಿಸಿದರು. ಒಳಮೀಸಲಾತಿ ಹೋರಾಟಕ್ಕೆ ಸಮುದಾಯದ
ಸಾವಿರಾರು ಜನ ಭಾಗಿಯಾಗಿದ್ದಾರೆಂದು ಆಕ್ರೋಶ
ವ್ಯಕ್ತಡಿಸಿದರು. ಇದರಿಂದ ಕಾರ್ಯಕ್ರಮದಲ್ಲಿ ಕೆಲ ಸಮಯ
ಗೊಂದಲವುಂಟಾಯಿತು.