ಚಳ್ಳಕೆರೆ : ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ತಾಲೂಕು ಕಛೇರಿಯಲ್ಲಿ ಶನಿವಾರ ಡಾ.ಬಾಬು ಜಗಜೀವನ ರಾಮ್ ಜಯಂತಿ ಅಂಗವಾಗಿ ಚಿತ್ರದುರ್ಗ ರಸ್ತೆಯಲ್ಲಿರುವ ಪುತ್ಥಳಿಗೆ ಮಾಲರ್ಪಣೆ ಮಾಡಿ ನಂತರ ತಾಲೂಕು ಕಛೇರಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ ಮಾತನಾಡಿದರು.
ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು,1986 ರಲ್ಲಿ ಸಾಯುವವರೆಗೂ ಅವರು ಸಂಸತ್ತಿನಲ್ಲಿ ಸೇವೆ ಸಲ್ಲಿಸಿದರು, ದಲಿತ ಐಕಾನ್ ಸ್ಥಾನಮಾನಕ್ಕೆ ಏರಿದರು, ದಮನಿತರ ಸುಧಾರಣೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದರು ಎಂದರು.
ನಗರಸಭೆ ಸದಸ್ಯ ಕೆ.ವೀರಭದ್ರಯ್ಯ ಮಾತನಾಡಿ, ಇಂದಿನ ಯುವ ಜನತೆ ಡಾ. ಬಾಬು ಜಗಜೀವನ್ ರಾಮ್ ಅವರ ಜೀವನ ಆದರ್ಶ, ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯುವ ಪೀಳಿಗೆಗೆ ಅವರ ವ್ಯಕ್ತಿತ್ವ ಜೀವನ ಚರಿತ್ರೆ ಪರಿಚಯಿಸುವ ಕಾರ್ಯ ನಡೆಯಬೇಕು. ಅವರು ಅಡಿಪಾಯ ಹಾಕಿಕೊಟ್ಟಂತಹ, ಹಸಿರು ಕ್ರಾಂತಿಯ ಯೋಜನೆ ಸರ್ವ ಕಾಲಕ್ಕೂ ಜಗಜೀವನ್ ರಾಮ್ ಸಾರಿ ಸಾರಿ ಹೆಸರು ಹೇಳುತ್ತದೆ. ಈ ದೇಶದ ಬಡ ವರ್ಗದ ಜನತೆಗೆ ಹಸಿವನ್ನು ನೀಗಿಸುವ ಮೂಲಕ, ನಿರಂತರ ಶಾಂತಿ ದೊರಕುವಂತೆ ಹೋರಾಟ ನಡೆಸಿದ ಹಸಿರು ಕ್ರಾಂತಿಯ ಹರಿಕಾರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತಹಶಿಲ್ದಾರ ರೇಹಾನ್ ಪಾಷ ಮಾತನಾಡಿ, ಎರಡನೆ ಕೋರೋನಾ ಹರಡುವ ಹಿನ್ನೆಲೆಯಲ್ಲಿ ಡಾ.ಬಾಬು ಜಗಜೀವಮ್ ರಾಮ್ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ. ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಮ್ ಅವರು ಶೋಷಿತರ ಹಕ್ಕಿಗಾಗಿ ಹೋರಾಡಿದವರು, ಹಸಿರು ಕ್ರಾಂತಿಯ ಹರಿಕಾರ. ಆಹಾರ ಉತ್ಪಾದನೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೃಷಿ, ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದರು, ಅವರ ಸೇವೆ ಸ್ಮರಣೀಯವಾದದು. ಅವರ ಜೀವನ ಚರಿತ್ರೆ ಯುವ ಪೀಳಿಗೆಗೆ ತಲುಪಿಸುವ ಕಾರ್ಯ ನಡೆಯಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ದೇವ್ಲಾನಾಯ್ಕ್, ಈ ಸಮಯದಲ್ಲಿ ನಗರಸಭೆ ಅಧ್ಯಕ್ಷೆರಾದ ಆರ್.ಮಂಜುಳಾ ಪ್ರಸನ್ನ ಕುಮಾರ್, ಉಪಾಧ್ಯಕ್ಷೆ ಸುಮಾ ಭರಮಯ್ಯ, ನಗರಸಭೆ ಸದಸ್ಯರಾದ ರಾಘವೇಂದ್ರ, ಹೊಯ್ಸಳ ಗೋವಿಂದ್, ಚಳ್ಳಕೆರಪ್ಪ, ಓ.ಸುಜಾತ, ಕೆ.ವೀರಭದ್ರಯ್ಯ, ಸುಮಕ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ್,
ಗದ್ದಿಗೆ ತಿಪ್ಪೇಸ್ಬಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್ ಸಮರ್ಥರಾಯ, ನಗರಸಭೆ ಮಾಜಿ ಉಪಾಧ್ಯಕ್ಷ ವಿಜಯಕುಮಾರ್, ಮುಖಂಡರಾದ ಸಿಬಿ.ಜಯಕುಮಾರ್, ನಾಗರಾಜ್, ಚೌಳೂರು ಪ್ರಕಾಶ್, ಗುಜ್ಜರಾಪ್ಪ, ಭರಮಣ್ಣ, ಕೃಷ್ಣಮೂರ್ತಿ, ಪಾಲಯ್ಯ, ಇತರ ಸಮಾಜದ ಮುಖಂಡರು ಅಧಿಕಾರಿಗಳು ಇದ್ದರು