ಚಳ್ಳಕೆರೆ :
ಹೊಳಲ್ಕೆರೆ: ಯಾವ ಪುರುಷಾರ್ಥಕ್ಕೆ ಸಿಎಂ ಆಗಿದ್ದೀರಾ
ಯಾವ ಪುರುಷಾರ್ಥಕ್ಕೊಸ್ಕರ ನೀವು ಮುಖ್ಯ ಮಂತ್ರಿಗಳಾಗಿದ್ದೀರಾ
ಸಿದ್ದರಾಮಯ್ಯ ಅವರೇ ಎಂದು ಹೊಳಲ್ಕೆರೆ ಶಾಸಕ ಎಂ.
ಚಂದ್ರಪ್ಪ ಸಿಎಂಗೆ ಪ್ರಶ್ನೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗದಲ್ಲಿಂದು ಮಾತಾಡಿ, 18 ಬಜೆಟ್ ಮಂಡಿಸಿದ್ದೇನೆಂದು
ಜನರ ಮೆಚ್ಚಿಸಲು ಹೋಗಬೇಡಿ, ಜನರ ಕಷ್ಟವನ್ನು ಅರ್ಥ
ಮಾಡಿಕೊಳ್ಳಬೇಕು. 6. 5 ಕೋಟಿ ಜನರು ಇಂದು ಶಾಪ
ಹಾಕುತ್ತಿದ್ದಾರೆ. ಸಾರ್ವಜನಿಕರ ಬದುಕಿನಲ್ಲಿ ಆಟ ಆಡುತ್ತಿದ್ದಿರಾ,
ಇದು ನಿಮಗೆ ಶೋಭೆ ತರಲ್ಲ. ಬೆಲೆ ಏರಿಸಿ ಜನರಿಗೆ ತೊಂದರೆ
ಕೊಡುತ್ತಿದ್ದಿರಾ ಎಂದರು.