ಚಳ್ಳಕೆರೆ :
ಈ ದಿನ ದಿನಾಂಕ-04/04/2025 ರಂದು ಬೆಳಗಿನ ಜಾವ ಚಳ್ಳಕೆರೆ ವಲಯ ವ್ಯಾಪ್ತಿಯಲ್ಲಿ ಹಿರಿಯೂರು ಉಪ ವಿಭಾಗ, ಚಳ್ಳಕೆರೆ ವಲಯ, ಮೊಳಕಾಲ್ಮೂರು ವಲಯ , ಜಿಲ್ಲಾ ವಿಚಕ್ಷಣ ದಳ ಇವರೊಂದಿಗೆ ಜಂಟಿಯಾಗಿ ಸಾಮೂಹಿಕ ದಾಳಿಯನ್ನು ನಡೆಸಲಾಯಿತು. ನಾಗರಾಜು.ಸಿ ಅಬಕಾರಿ ನಿರೀಕ್ಷಕರು ಚಳ್ಳಕೆರೆ ವಲಯ ಇವರ ನೇತೃತ್ವದಲ್ಲಿ ಹಿರಿಯೂರು ಉಪ ವಿಭಾಗದ ಅಬಕಾರಿ ನಿರೀಕ್ಷಕರಾದ ಕಿರಣ್ ಅಪ್ಪಾಸಾಬ್, ಚಳ್ಳಕೆರೆ ವಲಯದ ಅಬಕಾರಿ ಉಪ ನಿರೀಕ್ಷಕರುಗಳಾದ , ಟಿ ರಂಗಸ್ವಾಮಿ ಮತ್ತು ಡಿಟಿ ತಿಪ್ಪಯ್ಯ ಹಾಗೂ ಮೊಳಕಾಲ್ಮುರು ವಲಯದ ಅಬಕಾರಿ ಉಪ ನಿರೀಕ್ಷಕರಾದ ದಾದಾಪೀರ್ ಮತ್ತು ಅಬಕಾರಿ ಮುಖ್ಯಪೇದೆಗಳಾದ ಮಂಜುಳಮ್ಮ. ಬಿ,ನಾಗರಾಜ ಎನ್. ರಮೇಶ್ ನಾಯ್ಕ ಮತ್ತು ಅಬಕಾರಿ ಪೇದೆಗಳಾದ ಬಸವರಾಜ್ ಮತ್ತು ದರ್ಶನ್ ಕುಮಾರ್ ಸಿ ಚಳ್ಳಕೆರೆ ವಲಯ ಇವರುಗಳೊಂದಿಗೆ ಗೋಪನಹಳ್ಳಿ ಗ್ರಾಮ, ದೊಡ್ಡ ಉಳ್ಳಾರ್ತಿ ಗ್ರಾಮಗಳಲ್ಲಿ, ಕಾಟಪ್ಪನಟ್ಟಿ ಚಳ್ಳಕೆರೆ ನಗರ ಹಾಗೂ ಜಾಜೂರು ಗ್ರಾಮಗಳಲ್ಲಿ ಸಾಮೂಹಿಕವಾಗಿ ದಾಳಿ ನಡೆಸಿ 02 ಘೋರ ಪ್ರಕರಣಗಳು 5-15(A) ಪ್ರಕರಣಗಳನ್ನು ದಾಖಲಿಸಿ 10 ಲೀಟರ್ ಅಕ್ರಮ ಮಧ್ಯ ಹಾಗೂ ಇಬ್ಬರು ಆರೋಪಿಗಳು ಹಾಗೂ 01 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಿ ಎನ್ ಎಸ್ ಎಸ್ 35(3) ಅಡಿಯಲ್ಲಿ ನೋಟಿಸ್ ಜಾರಿಗೊಳಿಸಿ ಬಿಡುಗಡೆಗೊಳಿಸಲಾಯಿತು.

