ಜಮೀನಿನ ಬೇಲಿಗೆ ಬೆಂಕಿ ಇಟ್ಟ ವಿಚಾರಕ್ಕೆ ಗಲಾಟೆ, ದೊಣೆಯಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿರುವ ವಿಡಿಯೋ ವೈರಲ್
ಚಳ್ಳಕೆರೆ:
ಜಮೀನ ಬೇಲಿಗೆ ಬೆಂಕಿ ಇಟ್ಟ ವಿಚಾರಕ್ಕೆ ದೊಣ್ಣೆಯಿಂದ ಹಲ್ಲೆ ಮಾಡಿದ ಕಾರಣ ಒರ್ವನಿಗೆ ಕೈಯಿ ಮುರಿದು ಮತ್ತೊರ್ವ ಮಹಿಳೆಗೆ ಗಾಯಗಳಾದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಯಲಗಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ವ್ಯಕ್ತಿ ಓರ್ವ ಬೇಲಿಗೆ ಬೆಂಕಿ ಇಟ್ಟಿದ್ದು ಈ ಹಿನ್ನೆಲೆಯಲ್ಲಿ ಸ್ವಲ್ಪ ಮೇಕ್ಕೆ ಜೋಳ ಬೆಳೆ ಸುಟ್ಟಿದೆ ಬೇಲಿಗೆ ಬೆಂಕಿ ಇಟ್ಟಿದ್ದ ಪ್ರಶ್ನೆ ಮಾಡಿದಕ್ಕೆ ಎರಡು ಗುಂಪುಗಳಮಧ್ಯೆ ಮಾತಿನ ಚಕಮಕಿನಡೆದು ಹಲ್ಲೆ ಮಾಡುವ ಮೂಲಕ ಚೆನ್ನವೀರ ಎಂಬ ವ್ಯಕ್ತಿಗೆ ಕೈ ಮುರಿಯುವಾಗೆ ಹಲ್ಲೆ ಮಾಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಕೆಲವು ಮಹಿಳೆಯರಿಗೆ ತಲೆ ಹಾಗೂ ಇತರೆ ಭಾಗಗಳಿಗೆ ಗಾಯಗಳಾಗಿದ್ದು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಆಸ್ಪತ್ರೆ ಗೆ ದಾಖಲಿಸಿದ್ದಾರೆ.
ಈ ಗಲಾಟೆ ವಿಚಾರ ಕುರಿತಂತೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಎರಡು ಪಾರ್ಟಿ ಕಡೆಯಿಂದ ಪ್ರಕಣ ದಾಖಲಾಗಿದೆ.

