ಗರ್ಭಾವಸ್ಥೆಯಲ್ಲಿ ಬೆಳೆಯುವ ಮಗುವಿಗೂ ಕಾನೂನಿನ ಹಕ್ಕುಗಳಿವೆ. ಪಾಲಕರು ಮನಸೊಇಚ್ಚೆ ಬಂದಂತೆ ಭ್ರೂಣ ಹತ್ಯೆ ಮಾಡಿಸುವಂತಿಲ್ಲ…
ಚಳ್ಳಕೆರೆ:
ಮಾನವ ಹಕ್ಕುಗಳು ಉಲ್ಲಂಘನೆ ಆದಾಗ ನ್ಯಾಯ ದಕ್ಕಿಸಿಕೊಳ್ಳಲು ಮಾನವ ಹಕ್ಕುಗಳ ಆಯೋಗದ ನೆರವು ಪಡೆಯಬಹುದು ಎಂದು ಹಿರಿಯ ವಕೀಲ ಟಿ.ಎಸ್. ನಾಗರಾಜ ಹೇಳಿದರು.
ಚಳ್ಳಕೆರೆ ನಗರದ ಸರ್ಕಾರಿ ನೌಕರರ ಭವನದಲ್ಲಿ ಪ್ರಜಾತತ್ವ ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗದ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಗುರುತಿನ ಚೀಟಿ ವಿತರಣೆ ಹಾಗೂ ಪದಾಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗರ್ಭಾವಸ್ಥೆಯಲ್ಲಿ ಬೆಳೆಯುವ ಮಗುವಿಗೂ ಕಾನೂನಿನ ಹಕ್ಕುಗಳಿವೆ. ಪಾಲಕರು ಮನಸೊಇಚ್ಚೆ ಬಂದಂತೆ ಭ್ರೂಣ ಹತ್ಯೆ ಮಾಡಿಸುವಂತಿಲ್ಲ. ಹೆಣ್ಣು-ಗಂಡು ಎನ್ನುವ ಲಿಂಗ ತಾರತಮ್ಯ ಮಾಡುವಂತಿಲ್ಲ. ವಿಶ್ವದ ಮನುಕುಲದಲ್ಲಿ ಸಮಾನತೆ ಕಾನೂನುಗಳಿವೆ. ಕಾನೂನು ಉಲ್ಲಂಘಿಸಿ ದರ್ಪ, ಹಲ್ಲೆ, ದೌರ್ಜನ್ಯ ನಡೆಸುವಂತಿಲ್ಲ. ಅಧಿಕಾರ ಇರುವ ಪೊಲೀಸರು ಮನಬಂದಂತೆ ಜನರನ್ನು ಬಂಧಿಸುವುದಾಗಲಿ, ಹಿಂಸೆ ಮಾಡುವ ರೀತಿ ನಡೆದುಕೊಳ್ಳುವಂತಿಲ್ಲ. ಅಂಬೇಡ್ಕರ್ ದೇಶ ಎನ್ನುವ ಕುಟುಂಬದ ಯಜಮಾನನಂತೆ ಪ್ರತಿಯೊಬ್ಬರ ರಕ್ಷಣೆಗೆ ಸಂವಿಧಾನದ ರಕ್ಷಣೆ ನೀಡಿದ್ದಾರೆ. ಇದನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಅನ್ಯಾಯಕ್ಕೆ ಒಳಗಾದವರಿಗೆ ಮತ್ತು ನೊಂದ ಕುಟುಂಬಗಳಿಗೆ ಮಾನವ ಹಕ್ಕುಗಳ ಕಾನೂನುಗಳು ತಿಳಿಸಬೇಕು. ಇದಕ್ಕೆ ಜಾಗೃತಿಯಾಗಿ ಸಂಘಟನೆಗಳು ಗಟ್ಟಿಗೊಳ್ಳಬೇಕು ಎಂದು ಹೇಳಿದರು.
ಫೌಂಡೇಷನ್ ಸಂಸ್ಥಾಪಕ ನಾರಾಯಣರೆಡ್ಡಿ ಮಾತನಾಡಿ, ಮಾನವ ಹಕ್ಕುಗಳ ಎನ್ನುವುದು ಭಾರತದ ಸಂಸ್ಕೃತಿಯಲ್ಲೇ ಆಳವಾಗಿ ಬೇರೂರಿದೆ ಇವುಗಳನ್ನು ರಕ್ಷಿಸಿ ಉಳಿಸಿ ಬೆಳೆಸಲು ಸಮಾಜದ ಪ್ರತಿಯೊಬ್ಬರು ಜವಾಬ್ದಾರಿ ಯಾಗಿದೆ. ಈಗಾಗಲೇ ಆಯೋಗವು ಉತ್ತಮವಾದ ಕಾರ್ಯ ನಡೆಸಿಕೊಂಡು ಬರುತ್ತಿದ್ದು ಅನ್ಯಾಯ ಅಕ್ರಮ ತುಳಿತಕ್ಕೆ ಒಳಗಾದವರ ಪರ ನಮ್ಮ ಆಯೋಗ ನಿಲ್ಲಲಿದೆ ಎಂದರು.
ಮಾನವ ಹಕ್ಕುಗಳ ಅಯೋಗ ಫೌಂಡೇಶನ್ ಜಿಲ್ಲಾಧ್ಯಕ್ಷ ಸುರೇಶ್ ಬೆಳಗೆರೆ ಮಾತನಾಡಿ ಮಾನವ ಹಕ್ಕವಳು ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ನೈತಿಕ ತತ್ವಗಳ ಅಥವಾ ಮಾನವ ನಡುವಳಿಕೆಯ ಮಾನದಂಡಗಳನ್ನು ಸ್ಥಾಪಿಸುವ ಮಾನದಂಡಗಳಾಗಿವೆ . ಮತ್ತು ಅವುಗಳನ್ನು ಹೆಚ್ಚಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕಾನೂನುಗಳಿಂದ ರಕ್ಷಿಸಲಾಗುತ್ತದೆ . ಮಾನವ ಹಕ್ಕುಗಳ ಆಯೋಗದ ಫೌಂಡೇಶನ್ 4000ಕ್ಕೂ ಸದಸ್ಯರನ್ನು ಹೊಂದಿ ಅನ್ಯಾಯ ತುಳಿತಕ್ಕೆ ಒಳಗಾದವರನ್ನು ರಕ್ಷಿಸುವಂತಹ ಕೆಲಸ ಮಾಡುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಸಿ.ಟಿ. ವೀರೇಶ್, , ಪೌಂಡೇಷನ್ ರಾಜ್ಯಾಧ್ಯಕ್ಷೆ ಆಶಾ ಮುರುಳಿ, ನಿವೃತ್ತ ಎಂಎಲ್ಸಿ ಅಧಿಕಾರಿ ಬಿ.ತಿಪ್ಪೇಸ್ವಾಮಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸೈಯದ್ ಇಮ್ರಾನ್, ಶಿಕ್ಷಕಿ ಬಿ. ಕವಿತಾ, ಎಂ.ಎನ್. ಮೃತ್ಯುಂಜಯ ಕಶು ಪ್ರದೀಪ್, ರಹಮನ್,ರಘುಪತಿ,ವಾಸೀಂ ಅಕ್ರಮ್, ಪೂಜಾರಿ ಪರಸಪ್ಪ ಮೃತ್ಯುಂಜಯ ಮತ್ತಿತರರು ಇದ್ದರು.
.

