“ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು”-ಕೆ.ಎಂ.ವೀರೇಶ್ ಅಭಿಮತ.
ಚಿತ್ರದುರ್ಗ:-ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ಶರಣ ಸಾಹಿತ್ಯ ಪರಿಷತ್ತಿನ ಕೆ.ಎಂ ವೀರೇಶ್ ಅಭಿಪ್ರಾಯಪಟ್ಟರು.ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಭಾರತೀಯ ಯೋಗ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗದ ರೋಟರಿ ಬಾಲಭವನದಲ್ಲಿ ಆಯೋಜಿಸಿದ್ದ “ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ”ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತೀಯ ಕೌಟುಂಬಿಕ ಜೀವನದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯಿದ್ದರೂ ಹೆಣ್ಣಿನ ಪಾತ್ರ ಮಹತ್ವದ್ದಾಗಿದ್ದು ಆಕೆ ನಿಭಾಯಿಸುವ ಕೆಲಸ-ಕಾರ್ಯಗಳು ಅವಳ ಸಹನೆ ಮತ್ತು ಕೌಟುಂಬಿಕ ಹೊಣಿಗಾರಿಕೆಯನ್ನು ಎತ್ತಿತೋರಿಸುತ್ತವೆ. ಆದ್ದರಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಗೌರವ ನೀಡಿ ಸಮ ಸಮಾಜವನ್ನು ನಿರ್ಮಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ನ್ಯಾಯವಾದಿ ಮತ್ತು ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರಾದ ಬಿ.ಕೆ.ರಹಮತ್ ವುಲ್ಲಾ ವಹಿಸಿ ಅಧ್ಯಕ್ಷೀಯ ಭಾಷಣ ಮಾಡಿದರು
ಈ ಸಂದರ್ಭದಲ್ಲಿ ಅಂದ ಮಹಿಳೆ ಮಂಜುಳಾ ಮತ್ತು ಪ್ರಾಣಿ ಪ್ರಿಯೆ ಸ್ಪೂರ್ತಿ ಹೆಚ್ಎಸ್ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಾರ್ಥನೆಯನ್ನು ಶ್ರೀಮತಿ ರಾಜೇಶ್ವರಿ ಶ್ರೀಧರ್ ಮಾಡಿದರೆ ಸ್ವಾಗತವನ್ನು ಬೆಳಕುಪ್ರಿಯ ಮಾಡಿದರು-ನಿರೂಪಣಿಯನ್ನು ನವೀನ್ ಮಸ್ಕಲ್ ಮಾಡಿದರೆ ವಂದನಾರ್ಪಣೆಯನ್ನು ಸತೀಶ್ ಕುಮಾರ್ ನಡೆಸಿಕೊಟ್ಟರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸದಸ್ಯರು “ಧೀರ ಮಹಿಳೆಯರು” ಎಂಬ ರೂಪಕವನ್ನು ಪ್ರಸ್ತುತ ಪಡಿಸಿದರು.
ಈ ಕಾರ್ಯಕ್ರಮದಲ್ಲಿ ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದಯಾ ಪುತೂರ್ಕರ್ , ರೋಟರಿ ಕ್ಲಬ್ ನ ಮಂಜುನಾಥ ಭಾಗವತ್,ರವಿ ಅಂಬೇಕರ್,ಬಿ.ಪಿ.ಶಿವರಾಂ ಪ್ರವೀಣ್ ಬೆಳಗೆರೆ, ,ನಿರ್ಮಲ ಮಂಜುನಾಥ್ ,
ಶಾರದಾ ಜೈ ರಾಮ್,
ಸೌಮ್ಯ,
ಸುಮಾ ರಾಜಶೇಖರ್,
ಡಾ.ಗೌರಮ್ಮ, ಶೋಭಾ ಮಲ್ಲಿಕಾರ್ಜುನ,
ಉಷಾರಾಣಿ,
ನಿರ್ಮಲ ಭಾರದ್ವಾಜ್ ಸೇರಿದಂತೆ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡಿದ್ದರು.

