ಚಳ್ಳಕೆರೆ : ತಾಲ್ಲೂಕು ಚಿಕ್ಕೇನಹಳ್ಳಿ ಗ್ರಾಮದ ನಾಗವೇಣಿ ಮತ್ತು ಪಿ.ಎಲ್.ಲಿಂಗೇಗೌಡ, ಕಂದಾಯ ಇಲಾಖೆ ಇವರ ಪುತ್ರನಾದ ಪಿ.ಎಲ್.ದಕ್ಷಿತ್ ಇವರು ಎಂ.ವಿ.ಎಸ್.ಸಿ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನಲ್ಲಿ ಪಡೆದಿರುತ್ತಾರೆ.
ಇವರು ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿಯಾಗಿದ್ದು 2022-23 ನೇ ಸಾಲಿನಲ್ಲಿ ಈ ಸಾಧನೆ ಮಾಡಿದ್ದಾರೆ.
ಸಧ್ಯ ಬೆಂಗಳೂರಿನ ಪಶು ವಿ.ವಿ ಯಲ್ಲೇ ಪಿ.ಎಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. ” ಈ ಸಾಧನೆಗೆ ನಾವು ಮೂಲತಃ ವ್ಯವಸಾಯಗಾರರ ಕುಟುಂಬದವರಾಗಿರುವುದಿಂದಲೂ ಹಾಗೂ ಪೋಷಕರ ಬೆಂಬಲ, ನನ್ನ ಮಾವನವರಾದ ಬಿ.ಟಿ.ರವೀಂದ್ರನಾಥ, ನಿವೃತ್ತ ಎ.ಡಿ, ಪಶು ಇಲಾಖೆ ಇವರ ಮಾರ್ಗದರ್ಶನ ಮತ್ತು ಕಾಲೇಜಿನಲ್ಲಿ ಉಪನ್ಯಾಸಕರ ಪ್ರೋತ್ಸಾಹ ಮತ್ತು ನಾನು ಮನಸ್ಸಿಟ್ಟು ಓದಿದ ಕಾರಣ ಉತ್ತಮ ಫಲಿತಾಂಶ ಬಂದಿದೆ. ಈ ಕೋರ್ಸ್ ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದೆ.
ಪಶು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಭವಿಷ್ಯದ ದಿನಗಳಲ್ಲಿ ಸಾಕಷ್ಟು ಬೆಲೆ ಇದೆ” ಎಂದು ದಕ್ಷಿತ್.ಪಿ.ಎಲ್ ಪ್ರತಿಕ್ರಿಯಿಸಿದ್ದಾರೆ.

