ಚಳ್ಳಕೆರೆ :
ಚಿತ್ರದುರ್ಗ: ಬಾಲ ಪೈಲ್ವಾನ್ ಪ್ರತಿಭೆಗೆ ತಲೆತೂಗಿದ
ಪೈಲ್ವಾನರು
ಚಿತ್ರದುರ್ಗ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿಂದು
ಕಣಿವೆ ಮಾರಮ್ಮನ ಜಾತ್ರೆ ಅಂಗವಾಗಿ 9 ನೇ ವರ್ಷದ ಹೊನಲು
ಬೆಳಕಿನ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ
ಜಿಲ್ಲೆಗಳಿಂದ ಪೈಲ್ವಾನರುಗಳು ಆಗಮಿಸಿ, ಶಕ್ತಿಪ್ರದರ್ಶಸಿದ್ದಾರೆ.
ಕುಸ್ತಿ
ಪಂದ್ಯಾವಳಿಯಲ್ಲಿ 5 ವರ್ಷದ ಬಾಲ ಪೈಲ್ವಾನ್ ಚಿರಂತ್ 7 ವರ್ಷದ
ಪೈಲ್ವಾನ್ ನ್ನು ಸೋಲಿಸಿದ್ದಾನೆ. ಚಿರಂತ್ ದಾವಣಗೆರೆಯ ಪೈಲ್ವಾನ್
ದುಗ್ಗಪ್ಪ ರ ಮೊಮ್ಮಗನಾಗಿದ್ದು, ರಾಜ್ಯ ವಿವಿಧೆಡೆಗಳಲ್ಲಿ ಕುಸ್ತಿಗಳನ್ನು
ಗೆದ್ದಿದ್ದಾನೆ.

