ಚಳ್ಳಕೆರೆ :

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ನಿರಾಸ ಪ್ರತಿಕ್ರಿಯೆ ಉಂಟಾಗಿತ್ತು.

ಕಟ್ಟಡಗಳ ಮೇಲೆ ಶೇಖಡಾ 60%ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸುವ
ಕುರಿತು ಹಾಗೂ, ಮಹಾರಾಷ್ಟ್ರೀಗರ ಕನ್ನಡ ವಿರೋಧಿ ನೀತಿ ಹಾಗೂ ಕನ್ನಡಿಗರ ಮೇಲೆ ನಡೆಯುತ್ತಿರುವ
ದಬ್ಬಾಳಿಕೆಯನ್ನು ಖಂಡಿಸಿ ಸೂಕ್ತ ಕ್ರಮ ಜರುಗಿಸಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಪದಾಧಿಕಾರಿಗಳು ಚಳ್ಳಕೆರೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದ್ದಾರೆ.

ಅವರು ಚಳ್ಳಕೆರೆ ತಾಲ್ಲೂಕಿಗೆ ಸಂಬಂಧಿಸಿದ ಸರ್ಕಾರಿ
ಕಛೇರಿಗಳಿಗೆ ವಾಣಿಜ್ಯ ಮಳಿಗೆಗಳಿಗೆ, ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಮಫಲಕಗಳನ್ನು ಶೇಖಡಾ 60%
ರಷ್ಟು, ಬಳಸಬೇಕು, ಹಾಗೂ ಕನ್ನಡ ನಾಮಫಲಕಗಳನ್ನು ಅಳವಡಿಸದ ಖಾಸಗಿ ಕಛೇರಿಗಳು ಹಾಗೂ
ಶಾಲಾ ಕಾಲೇಜುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಮತ್ತು ಇತ್ತೀಚೆಗೆ ಗಡಿನಾಡ
ಪ್ರದೇಶವಾದ ಬೆಳಗಾವಿಯಲ್ಲಿ ಎಮ್.ಇ.ಎಸ್. ಪುಂಡರ ಉಪಟಳ ಜಾಸ್ತಿಯಾಗಿದ್ದು, ಕನ್ನಡಿಗರು
ಎಲ್ಲಿಯೂ ಪ್ರಯಾಣಿಸದಂತಾಗಿದೆ.

ಕನ್ನಡಿಗರ ರಕ್ಷಣೆ ಹಾಗೂ ಕನ್ನಡ ಭಾಷೆ ನಾಡು ನುಡಿ-
ಸಂಸ್ಕೃತಿಯನ್ನು ರಕ್ಷಿಸಲು ಸರ್ಕಾರವು ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು, ಎಲ್ಲಿಯೇ ಕನ್ನಡ
ವಿರೋಧಿ ಚಟುವಟಿಕೆಗಳು ನಡೆದರೂ ಕೂಡಲೇ ತಕ್ಷಣಕ್ಕೆ ಸರ್ಕಾರ ಹೆಚ್ಚೆತ್ತು ಇಂತಹ ಕೃತ್ಯಗಳಲ್ಲಿ
ತೊಡಗಿರುವವರನ್ನು ಶಿಕ್ಷಿಸಬೇಕು, ಎಂದು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷ ಡಾ.ಸುನಿಲ್, ಚಳ್ಳಕೆರೆ ನಗರದ ಅಧ್ಯಕ್ಷ ‌ಮಾರುತಿ, ಶಿವಪುತ್ರ, ಶ್ರೀನಿವಾಸ್, ಜಯಣ್ಣ, ಮಂಜುನಾಥ್, ತಿಪ್ಪೇಸ್ವಾಮಿ, ಗುರುರಾಜ್, ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!