ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಭೆ ಏರ್ಪಡಿಸಲಾಗಿತ್ತು.
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವಂತೆ ಮಕ್ಕಳಿಗೆ ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ ರಂಗಪ್ಪ ಹೇಳಿದರು .
ಅವರು ಗ್ರಾಮ ಪಂಚಾಯತಿಯ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ
ಮಕ್ಕಳ ರಕ್ಷಣಾ ಸಮಿತಿ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ್ದಾರೆ ಇಂತಹ ಕಾಲಘಟ್ಟದಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ ಬಾಲ್ಯವಿವಾಹ ಜೀತಪದ್ಧತಿ ಬಿಕ್ಷಟನೆ ಇವುಗಳಿಂದ ಪೋಷಕರು ಮಕ್ಕಳನ್ನು ಹೊರತನ್ನಿ ಎಂದು ತಿಳಿಸಿದರು.
ಇದೇ ವೇಳೆ ತಾಲೂಕು ಮೇಲ್ವಿಚಾರಕಿ ಎಂ ಸೌಮ್ಯ ಮಾತನಾಡಿ ಪೋಷಕರು ವಯಸ್ಸಿಗೆ ಬಾರದ ಮಕ್ಕಳಿಗೆ ವಿವಾಹ ಮಾಡುವಂತಿಲ್ಲ ಸರ್ಕಾರದ ನಿಯಮ ಪ್ರಕಾರ ಹೆಣ್ಣುಗೆ 18 ವರ್ಷ ಗಂಡುಗೆ 21 ವರ್ಷ ಮದುವೆ ಮಾಡಲು ತುಂಬಿರಬೇಕು ಎಂದು ಸಭೆಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಪಾಠ ಶಾಲೆ ಮುಖ್ಯ ಶಿಕ್ಷಕರಾದ ಶಿವಣ್ಣ, ಎಸ್ಡಿಎಂಸಿ ಅಧ್ಯಕ್ಷ ಶಂಕ್ರಪ್ಪ, ಆಶಾ ಕಾರ್ಯಕರ್ತೆ ಜಯಲಕ್ಷ್ಮಿ, ಅಂಗನವಾಡಿ ಶಿಕ್ಷಕರಾದ ಎಸ್ ಅನುಸೂಯ, ಟಿ ಮಂಜುಳಾ ಅನಿತಾ ಎಸ್, ಡಿ ಶಿಲ್ಪ, ನಾಗವೇಣಿ ,ನಾಗರತ್ನಮ್ಮ ಬಿ, ಶಂಕ್ರಮ್ಮ, ಭಾಗ್ಯಮ್ಮ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ಗುರುಸ್ವಾಮಿ ,ವೀರೇಶ್, ಗ್ರಂಥಪಾಲಕ ಕರಿಬಸಪ್ಪ ,ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು