ಚಳ್ಳಕೆರೆ : ಸೋಮಗುದ್ದು ಗ್ರಾಮ ಪಂಚಾಯತಿಯಲ್ಲಿ ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಪಾರ್ವತಮ್ಮ, ಉಪಾಧ್ಯಕ್ಷೆಯಾಗಿ ಶೃತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ್ ಎನ್ ರಘುಮೂರ್ತಿ ಕರ್ತವ್ಯ ನಿರ್ವಹಿಸಿದರು.
ಇನ್ನೂ ನೂತನ ಅಧ್ಯಕ್ಷರನ್ನು ಕುರಿತು ಮಾತನಾಡಿದ ತಹಶೀಲ್ದಾರ್ ಎನ್ ರಘುಮೂರ್ತಿ, ಅಂಬೇಡ್ಕರ್ ರವರ ಸಂವಿಧಾನ ಆಶಯದಂತೆ ಮಹಿಳೆಯರಿಗೆ ಮತ್ತು ದುರ್ಬಲ ವರ್ಗದವರಿಗೆ ರಾಜಕೀಯದಲ್ಲಿ ವಿಶೇಷ ಸ್ಥಾನಮಾನವನ್ನು ನೀಡುವ ಮೂಲಕ ಇಂದು ಅಧಿಕಾರಕ್ಕೆ ವಹಿಸಿಕೊಂಡಿದಿರೀ ಅದರಂತೆ ಸಾಮಾಜದ ಕಟ್ಟ ಕಡೆಯ ವ್ಯಕಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಮಾಣಿಕ ಕೆಲಸಮಾಡಿ ಎಂದರು.
ಗ್ರಾಮದಲ್ಲಿ ವೈಯಕ್ತಿಕ ಪ್ರಭಾವಗಳಿಗೆ ಒಳಗಾಗದೆ ಬಡವರ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಮತ್ತು ಸಮಾಜದ ಋಣ ತೀರಿಸುವ ಕೆಲಸ ಮಾಡಿದಂತಾಗುತ್ತದೆ ಆದುದರಿಂದ ಪಂಚಾಯಿತಿಯಲ್ಲಿ ಬರುವಂತಹ ಸರ್ಕಾರಿ ಸ್ವತ್ತುಗಳ ಆದ ಗೋಮಾಳ ಹಳ್ಳ ದಾರಿ ಸ್ಮಶಾನ ಶಾಲಾ ಜಾಗ ಮುಂತಾದಗಳನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ನಿಮ್ಮದೇ ಆಗಿರುವುದರಿಂದ ಈ ನಿಟ್ಟಿನಲ್ಲಿ ತಾವು ಕೆಲಸ ನಿರ್ವಹಿಸಲು ವಿನಂತಿಸಿದರು
ಈದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಪಿಡಿಓ ತ್ರೀವೇಣಿ, ಸದಸ್ಯರು, ಹಾಗೂ ಇತರರು ಪಾಲ್ಗೊಂಡಿದ್ದರು