ಚಳ್ಳಕೆರೆ : ಕ್ಷುಲ್ಲಕ ಕಾರಣಕ್ಕೆ ಹುಡುಗರ ಮಧ್ಯೆ ಗಲಾಟೆ ಶುರುವಾಗಿ ಇಂದು ಜೈಲು ಪಾಲದ ಘಟನೆ ನಡೆದಿದೆ.
ಚಳ್ಳಕೆರೆ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ನಿತಿನ್ ಎಂಬ ಹುಡುಗನ ಮೇಲೆ ಹುಡುಗರ ಗುಂಪೊಂದು ಹಲ್ಲೆ ನಡೆಸಿದ್ದಾರೆ ಎನ್ನವ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಮಾರು 9 ಜನ ಹುಡುಗರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈ ಗೊಂಡಿದ್ದಾರೆ.
ಹುಡುಗರನ್ನು ಪೊಲಿಸ್ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ತಮ್ಮ ಪೋಷಕರು ಹಾಗೂ ನೂರಾರು ಜನರು ಪೊಲೀಸ್ ಠಾಣೆಯ ಆವರಣದಲ್ಲಿ ಜಮಾಯಿಸಿದ್ದರು
ಕುದ್ದಾಗಿ ಜಿಲ್ಲಾ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಠಾಣೆಗೆ ಆಗಮಿಸಿ ಗಲಾಟೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ .
ಪೊಲೀಸ್ ಅಧಿಕಾರಿಗಳು ಕೂಡ ವ್ಯಾಪ್ತಿ ಮೀರಿ ನಿಯಮ ಉಲ್ಲಂಘನೆ ಮೀರಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈ ಗೊಳ್ಳಲಾಗುವುದು, ಇವರು ನೀಡಿರುವ ಪ್ರಕರಣ ಆಧಾರದ ಮೇಲೆ ಕಾನೂನು ಕ್ರಮ ಕೊಂಡಿದ್ದೆವೆ ಎಂದಿದ್ದಾರೆ.
ಇನ್ನೂ ಮುಂಜಾನೆಯೇ ಠಾಣೆಗೆ ಆಗಮಿಸಿದ ಪೋಷಕರು ಠಾಣೆಗೆ ಸುತ್ತುವರಿದಿದ್ದರು ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕೂಡ ನಿಯೋಜಿಸಿಕೊಂಡ ಅಧಿಕಾರಿಗಳು ಕಾನೂನು ಪ್ರಕ್ರಿಯೆ ಮೂಲಕ ಶಿಸ್ತುಕ್ರಮ ಜರುಗಿಸಿದ್ದಾರೆ.