ಚಳ್ಳಕೆರೆ :
ಮೊಳಕಾಲ್ಕೂರು: ಪ್ರಾಣದ ಹಂಗು ತೊರೆದು ಚಿರತೆ
ಹಿಡಿದ ಫಾರೆಸ್ಟ ವಾಚರ್
ಮೊಳಕಾಲ್ಕೂರಿನ ಅಮುಕುಂದಿ ಬಳಿ ಅಡಗಿದ್ದ ಚಿರತೆಯನ್ನು
ಸೆರೆ ಹಿಡಿಯಲು ಅರಣ್ಯ ಇಲಾಖೆಯ ಸಾಹಸದ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫಾರೆಸ್ಟ ವಾಚರ್
ಚಿರತೆ ಹಿಡಿಯಲು ಸೆಣೆಸಾಡಿದ ವಿಡಿಯೋ ನೋಡಿದವರು ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ. ಅಮುಕುಂದಿ ಬಳಿ ಗುರುವಾರ ನಾಗೇಶ್ ರ
ಮಾವಿನ ತೋಪಿನಲ್ಲಿದ್ದ ಚಿರತೆಯನ್ನು ಹಿಡಿಯಲು ಪ್ರಾಣದ ಹಂಗು
ತೊರೆದು ಕೃಷ್ಣಮೂರ್ತಿ ಕವಿಗಟಿಗೆಯಿಂದ ಕೆಳಗೆ ಬೀಳಿಸಿದ್ದಾರೆ.
ಇಂತಹ ಸಾಹಸದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

