ಗ್ರಾಮ ಠಾಣ ವ್ಯಾಪ್ತಿಯ ಆಸ್ತಿಗಳನ್ನು ಡ್ರೋನ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ಮಾಡಲು ಗ್ರಾಮಸ್ಥರು ಸಹಕರಿಸಿಗ್ರಾಮ ಠಾಣ ವ್ಯಾಪ್ತಿಯ ಆಸ್ತಿಗಳನ್ನು ಡ್ರೋನ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ಮಾಡಲು ಗ್ರಾಮಸ್ಥರು ಸಹಕರಿಸಿ

ಚಿತ್ರದುರ್ಗ ಹೊಯ್ಸಳ
ಚಳ್ಳಕೆರೆ : ಗ್ರಾಮೀಣ ಭಾಗದಲ್ಲಿ ನಿವೇಶನ ಹಾಗೂ ಗ್ರಾಮದ ಒಳಗಿನ ಆಸ್ತಿಗಳಿಗೆ ದಾಖಲೆಗಳಿಲ್ಲದೆ ಜನರುಸಮಸ್ಯೆಗಳ ಅನುಭವಿಸುತ್ತಿದ್ದಾರೆ, ಇದರಿಂದ ಗ್ರಾಮ ಠಾಣಾ ವ್ಯಾಪ್ತಿಯ ಜಾಗವನ್ನು ಡ್ರೋನ್ ತಂತ್ರಜ್ಞಾನದ ಮೂಲಕ ಸಮೀಕ್ಷೆ ಮಾಡಲು ರೈತರು ಗ್ರಾಮಸ್ಥರು ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಭೂ ಮಾಪನ ಇಲಾಖೆಯ ಅಧಿಕಾರಿ ನಾಗರಾಜ್.ಆರ್ ತಿಳಿಸಿದರು.

ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡೆಕುಂಟೆ ಗ್ರಾಮದಲ್ಲಿ ತಾಲೂಕು ಆಡಳಿತ ಭೂ ಮಾಪನ ಇಲಾಖೆ ಕಂದಾಯ ಇಲಾಖೆ ಸಾಣಿಕೆರೆ ಗ್ರಾಮ ಪಂಚಾಯಿತಿಯ ಸಂಯುಕ್ತ ಆಶಯದಲ್ಲಿ ನಡೆದ ವಿಶೇಷ ಗ್ರಾಮ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು
ಡ್ರೋನ್ ತಂತ್ರಜ್ಞಾನದ ಮೂಲಕ ಭೂಮಿಯ ಮೇಲೆ ಏನೇನು ಇದೆ ಎಂಬುದನ್ನು ಅಳತೆ ಸಮೇತ ಸಮೀಕ್ಷೆ ಮಾಡಲಾಗುತ್ತದೆ. ಸರ್ಕಾರದ ಆದೇಶದ ಪ್ರಕಾರ ಗ್ರಾಮ ಠಾಣಾ ವ್ಯಾಪ್ತಿಯ ಆಸ್ತಿಯನ್ನು ಮೊದಲು ಸಮೀಕ್ಷೆ ಮಾಡಿ ಎಂದು ಹೇಳಿದೆ. ಪ್ರತಿಯೊಂದು ಪಂಚಾಯಿತಿ ಹಾಗೂ ಗ್ರಾಮಗಳನ್ನು ಸರ್ವೆ ಆಫ್ ಇಂಡಿಯಾ ಇಲಾಖೆಯವರಿಂದ ಮಾಡಲಾಗುತ್ತಿದೆ.

ಈ ಯೋಜನೆಯು ಪ್ರಾಯೋಗಿಕವಾಗಿ ಮೊದಲಿಗೆ 21 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಯಿತು ನಂತರ ಎರಡನೇ ಹಂತದಲ್ಲಿ 50 ಗ್ರಾಮಗಳನ್ನು ಆಯ್ಕೆ ಮಾಡಿ ಸಮೀಕ್ಷೆಯನ್ನು ನಡೆಸುವಂತೆ ಆದೇಶ ನೀಡಿದೆ, ಗ್ರಾಮದಲ್ಲಿ ಯಾರ ಹೆಸರಿಗೆ ಖಾತೆ ಇದೆ ಗ್ರಾಮಠಾಣ ವ್ಯಾಪ್ತಿಯ ಆಸ್ತಿಯನ್ನು ಅಳತೆ ಮಾಡುವುದು ಗ್ರಾಮ ಪಂಚಾಯಿತಿ ಅವರದಗಿರುತ್ತದೆ. ಕಂದಾಯವನ್ನು ಅಳತೆ ಮಾಡುವುದು ಸರ್ವೆ ಮಾಡುವುದು ಸರ್ವೆ ಇಲಾಖೆಯವರು ಖಾತೆ ಮಾಡುವುದು ತಹಶೀಲ್ದಾರ್ ಇಲಾಖೆಯವರು ಎಂದು ಅಧಿಕಾರವನ್ನು ಹಂಚಿಯಾಗಿದೆ ಗ್ರಾಮ ಠಾಣಾ ವ್ಯಾಪ್ತಿಯನ್ನು ಪಿಡಿಒ ಗೆ ಸಂಬಂಧಿಸಿರುತ್ತದೆ ಇದರಿಂದ ಪ್ರತಿಯೊಬ್ಬರೂ ಡ್ರೋನ್ ತಂತ್ರಜ್ಞಾನದ ಮೂಲಕ ಮಾಡುವ ಸಮೀಕ್ಷೆಗೆ ಸಹಕರಿಸಿ ಎಂದರು

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ್ ಮಾತಾನಡಿ ಗ್ರಾಮ ಠಾಣಾ ವ್ಯಾಪ್ತಿಗೆ ಸೇರಿದ ಜಾಗದಲ್ಲಿ ಹಲವು ಜನರು ಬಹಳ ವರ್ಷಗಳ ಕಾಲ ತಮ್ಮ ತಮ್ಮ ಮನೆಗಳಲ್ಲಿಯೇ ವಾಸವಿದ್ದರೂ ಮನೆಯ ದಾಖಲೆಗಳಿಲ್ಲದೆ ಜನರಿಗೆ ಬ್ಯಾಂಕ್ ಹಾಗೂ ಸಹಕಾರ ಸಂಘಗಳಿಂದ ಸಾಲ ಸೌಲಭ್ಯಗಳು ಸಿಗದೇ ಕಂಗಾಲಾಗಿರುವ ಜನತೆಗೆ ಈ ಯೋಜನೆ ಸಹಾಯವಾಗಿದೆ ಈ ಯೋಜನೆಯನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಂಡು ತಮ್ಮ ಆಸ್ತಿಗಳ ಮನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರಾಜ್ , ಪಂಚಾಯಿತಿ ಸದಸ್ಯರು, ಭೂ ಮಾಪನ ಇಲಾಖೆಯ ಸಿಬ್ಬಂದಿಗಳಾದ ಮಾರಣ್ಣ, ರೈತರಾದ ಗುರುಮೂರ್ತಿ, ಚಂದ್ರಣ್ಣ, ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!