“ಪರೋಪಕಾರದಿಂದ ಜೀವನ ಸಾರ್ಥಕ”-ಮಾತಾಜೀ ತ್ಯಾಗಮಯೀ ಅಭಿಮತ. ಚಳ್ಳಕೆರೆ- “ಪರೋಪಕಾರದ ಪಾಲನೆಯಿಂದ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದು ನಗರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ತಿಳಿಸಿದರು. ತಾಲೂಕಿನ ಚಿಕ್ಕಮ್ಮನಹಳ್ಳಿ ಸಮೀಪದ ದೇವರಹಟ್ಟಿ ಗ್ರಾಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಲಕ್ಷ್ಮೀ ಚೆನ್ನಕೇಶವ ಅವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ತಿಂಗಳ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಜನರು ಆಸೆಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲು ಅವುಗಳಿಗೆ ಕಡಿವಾಣ ಹಾಕಿ ಉತ್ತಮ ಬದುಕನ್ನು‌ ಕಟ್ಟಿಕೊಳ್ಳಬಹುದು ಎಂದರು. ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಮಾತಾಜೀ ಅನನ್ಯಮಯೀ ಅವರು ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟು ಮಾತನಾಡಿ ಇತರರ ಕಷ್ಟ-ಸುಖಗಳಿಗೆ ಸಹಭಾಗಿಯಾಗಿ ಅವುಗಳಿಗೆ ಸ್ಪಂದಿಸುವ ಸದ್ಗುಣಗಳನ್ನು ಮಕ್ಕಳು ತಮ್ಮ ಬಾಲ್ಯಜೀವನದಲ್ಲಿಯೇ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಚಳ್ಳಕೆರೆ ನಗರಸಭೆಯ ನಾಮನಿರ್ದೇಶಿತ ಸದಸ್ಯರಾದ ಶ್ರೀನೇತಾಜಿ ಪ್ರಸನ್ನ ಮಾತನಾಡಿ ಚಳ್ಳಕೆರೆಯ ಶ್ರೀಶಾರದಾಶ್ರಮವು ದಿವ್ಯತ್ರಯರ ಜೀವನ ಮತ್ತು ಸಂದೇಶಗಳನ್ನು ಇಂತಹ ಕುಗ್ರಾಮದ ಜನರಿಗೆ ತಲುಪಿಸುತ್ತಿರುವುದು ತುಂಬಾ ಶ್ಲಾಘನೀಯ ಸೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಲಕ್ಷ್ಮೀ ಚೆನ್ನಕೇಶವ,ಬೊಮ್ಮಕ್ಕ, ಎತ್ತಿನ ಕಾಟಯ್ಯ, ಯತೀಶ್ ಎಂ ಸಿದ್ದಾಪುರ, ಡಾ.ಭೂಮಿಕ, ಸಂತೋಷ್, ಚೇತನ್, ಮಾನ್ಯ,ಭಾವನಾ, ಶಾರದಾ, ಇಂದು ಸೇರಿದಂತೆ ದೇವರಹಟ್ಟಿ ಗ್ರಾಮದ ಸದ್ಭಕ್ತರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!