ಚಳ್ಳಕೆರೆ :

ಬೇಸಿಗೆ ಪ್ರಾರಂಭವಾಗಿದೆ ಕುಡಿಯುವ ನೀರಿನ ಹಾಹಾಕಾರ ಉಂಟಾಗಂತೆ ಅಧಿಕಾರಿಗಳು ಗಮನಹರಿಸಬೇಕಾದ ಅನಿವಾರ್ಯ ತೆ ಇದೆ,

ತುರುವನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಐದನೇ ವಾರ್ಡಿನ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ,

ಆದರೆ ಕಳೆದ ಐದು ವರ್ಷವಾದರೂ ನೀರಿನ ಸಂಪರ್ಕ ಇಲ್ಲದೆ ಅವಸನದ ಹಂಚಿಗೆ ತಲುಪಿದೆ.

ಇನ್ನೂ ರೈತರು ತಮ್ಮ‌ ದನಕರುಗಳು ಕಟ್ಟಲು ಬಳಸಿಕೊಳ್ಳುತ್ತಿದ್ದಾರೆ.

ಈ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ಹೆಚ್ಚಿದೆ ಹಲವಾರು ವರ್ಷಗಳಿಂದ ಇಲ್ಲಿನ ನಿವಾಸಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರು ವಾರ್ಡಿನ ಸದಸ್ಯರಿಗೂ ಪಿಡಿಒಗು ಮನವಿ ಸಲ್ಲಿಸಿದರು ಯಾರು ಇತ್ತ ಕಡೆ ಗಮನ ಹರಿಸುವುದಿಲ್ಲ ಗ್ರಾಮ ಪಂಚಾಯತಿಗೆ ಎಷ್ಟೇ ಮನವಿ ಸಲ್ಲಿಸಿದರು ಕಿವಿ ಕೇಳದಂತೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸದಸ್ಯರು ಕಿವಿ ಕೇಳಿಸಿದಂತೆ ಇದ್ದಾರೆ.

ತುರುನೂರು ಗ್ರಾಮ ಪಂಚಾಯತಿ ವ್ಯಾಪ್ತಿ 5ನೇ ವಾರ್ಡಿನ 2016ನೇ 17ನೇ ಸಾಲಿನಲ್ಲಿ ನಿರ್ಮಿಸಿದ ಈ ಟ್ಯಾಂಕ್ ಗೆ ನೀರಿನ ಸಂಪರ್ಕ ಇರುವುದಿಲ್ಲ, ಆದ್ದರಿಂದ ಗ್ರಾಮ ಪಂಚಾಯತಿ ಸದಸ್ಯರು ಮತ್ತು ತಮ್ಮ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಈ ವಾರ್ಡಿನ ಜನಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕು ಎಂದು ತುರುವನೂರು ಗ್ರಾಮದ ರಮೇಶ ಆರ್ ಕೋಟೆಗಳ ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!