“ಜಗತ್ತಿನ ಸೃಷ್ಟಿಗೆ ದೇವಿ‌ ತತ್ವವೇ ಆಧಾರ”-ಮಾತಾಜೀ ತ್ಯಾಗಮಯೀ.

ಚಳ್ಳಕೆರೆ-ಜಗತ್ತಿನ ಸೃಷ್ಟಿಗೆ ದೇವಿ‌ ತತ್ವವೇ ಆಧಾರ ಎಂದು ನಗರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಹೇಳಿದರು.

ಶಿವನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದೇವಾಲಯಗಳು ನಮ್ಮ ಸನಾತನ ಪರಂಪರೆಯ ಹೆಗ್ಗುರುತುಗಳಾಗಿದ್ದು ಅವುಗಳ ರಚನೆಯ ಹಿಂದೆ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶಾರೀರಿಕ ಹಿನ್ನೆಲೆಯಿದೆ. ಭಾರತೀಯ ಸನಾತನ ಪರಂಪರೆಗೆ ಮಹಿಳಾ ಸಾಧಕಿಯರ ಕೊಡುಗೆ ಮಹತ್ವದ್ದಾಗಿದ್ದು ಅವರ ಜೀವನ ಮತ್ತು ಸಾಧನೆಗಳನ್ನು ಇಂದಿನ ನಾಗರಿಕ ಜನರು ಸ್ಮರಿಸಿ ಗೌರವಿಸುವ ಕಾರ್ಯ ಆಗಬೇಕಿದೆ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಸಾಧಕಿ ಸ್ತ್ರೀಯರನ್ನು ಸ್ಮರಿಸಿದರು.ಈ ಸಂದರ್ಭದಲ್ಲಿ ನಗರದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸಾಂಸ್ಕೃತಿಕ ಮತ್ತು ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಈ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಪೊಲೀಸ್ ಉಪಾಧೀಕ್ಷಕ ಟಿ.ಬಿ ರಾಜಣ್ಣ,
ಟಿ.ಪ್ರಭುದೇವ,ಬಿ.ಸಿ.ಸಂಜೀವಮೂರ್ತಿ, ವಿಜಯೇಂದ್ರ,ಸುಮನ ಕೋಟೇಶ್ವರ, ಯಶೋಧಾ ಪ್ರಕಾಶ್, ವನಜಾಕ್ಷಿ ಮೋಹನ್, ಮಾಣಿಕ್ಯ ಸತ್ಯನಾರಾಯಣ, ಉಷಾ ಶ್ರೀನಿವಾಸ್, ಯತೀಶ್ ಎಂ ಸಿದ್ದಾಪುರ, ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!