ಚಳ್ಳಕೆರೆ : ಕಲ್ಯಾಣ ಕರ್ನಾಟಕ ವೇದಿಕೆ ಹೊಸದುರ್ಗ ಇವರು ಆಯೋಜಿಸಿರುವ ದಿವಂಗತ ಡಾ.ಪುನೀತ್‌ರಾಜ್‌ಕುಮಾರ್ ಸವಿನೆನಪು ಮತ್ತು ಸಂಗೀತ ಸಂಭ್ರಮ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ ” ಕರ್ನಾಟಕ ಕಲ್ಯಾಣ ಸೇವಾ ಕಲಾರತ್ನ ಜಿಲ್ಲಾ ಪ್ರಶಸ್ತಿ” ಪ್ರಧಾನ ಕಾರ್ಯಕ್ರಮದಲ್ಲಿ ಟಿ.ಶಿವಮೂರ್ತಿ ಕೋಡಿಹಳ್ಳಿ ಇವರಿಗೆ ಶಿಕ್ಷಣ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ” ಕಲ್ಯಾಣ ಸೇವಾ ಕಲಾರತ್ನ ಜಿಲ್ಲಾ ಪ್ರಶಸ್ತಿ ” ನೀಡಿ ಗೌರವಿಸಲಾಯಿತು..


ಕರುನಾಡ ಹಣತೆ ಕವಿ ಬಳಗ, ಚಿತ್ರದುರ್ಗ ಮತ್ತು ತನುಶ್ರಿ ಪ್ರಕಾಶನ ಸಂಸ್ಥೆ, ಸೂಲೆನಹಳ್ಳಿ.. ರಾಜ್ಯಾಧ್ಯಕ್ಷರು, ಸಾಹಿತಿಗಳು, ಕವಿಗಳು, ಪ್ರಕಾಶಕರು ಆದ ಕವಿ ರಾಜು ಎಸ್ ಸೂಲೇನಹಳ್ಳಿ ಇವರ ಸಾಧನೆಯನ್ನು ಗುರುತಿಸಿ ” ಕಲ್ಯಾಣ ಸೇವಾ ಕಲಾ ರತ್ನ ಜಿಲ್ಲಾ ಪ್ರಶಸ್ತಿ ” ನೀಡಿದರು, ಇನ್ನೂ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ಸರಸ್ವತಿ ಕೆ.ನಾಗರಾಜ್ ಕವಯತ್ರಿ, ಇವರಿಗೆ ಜಿಲ್ಲಾ ಮಟ್ಟದ ” ಕಲ್ಯಾಣ ಸೇವಾ ಕಲಾ ರತ್ನ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು..

About The Author

Namma Challakere Local News
error: Content is protected !!