ಚಳ್ಳಕೆರೆ : ಸಮಾಜದ ಸ್ವಾಥ್ಯ ಕಾಪಾಡಬೇಕಾದ ಜನರೇ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಅನಾಮದೇಯ ಪೋಸ್ಟ್ಗಳನ್ನು ಹಾಕುವುದರ ಮೂಲಕ ಸಮಾಜದಲ್ಲಿ ಕೊಮು ಗಲಬೆ ಸೃಷ್ಠಿ ಮಾಡುತ್ತಿದ್ದಾರೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಜೆ.ತಿಪ್ಪೆಸ್ವಾಮಿ ಹೇಳಿದ್ದಾರೆ.
ನಗರದ ಪೋಲೀಸ್ ಠಾಣೆ ಆವರಣದಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಕುರಿತಾದ ಸಭೆಯಲ್ಲಿ ಮಾತನಾಡಿದರು.
ರಾಮ ರಹಿಂ ಅಲ್ಲ ಎಂಬ ಭೇಧ ಭಾವ ತೋರದೆ ತಮ್ಮ ಸಮುದಾಯಗಳ ಹಿತ ಕಾಯುವ ಮೂಲಕ ಯಾವುದೋ ಅನಾಮದೇಯ ಪೋಸ್ಟ್ಗಳಿಗೆ ಕಿವಿಗೊಡದೆ ನಗರದಲ್ಲಿ ಕೊಮು ಗಲಬೆಗೆ ಆಸ್ಪಾದ ನೀಡದೆ ಸೌಹರ್ದತೆಯನ್ನು ಕಾಪಾಡಿಕೊಳ್ಳಬೇಕು ಒಂದು ವೇಳೆ ಇಂತಹ ಸಾಮಾಜ ಘಾತುಕಗಳ ಪೊಸ್ಟ್ ನಿಮ್ಮ ಮೊಬೈಲ್ ಗೆ ಬಂದರೆ ತಕ್ಷಣ ಪೊಲಿಸ್ ಠಾಣೆಗೆ ಸಂಪರ್ಕಿಸಿ ಎಂದರು.
ಇನ್ನೂ ಪಿಎಸ್‌ಐ ಕೆ.ಸತೀಶ್ ನಾಯ್ಕ್ ಮಾತನಾಡಿ, ಭಾರತಿಯ ಸಮಾಜದಲ್ಲಿ ಧಾರ್ಮಿಕ ವಿಷ ಬೀಜ ಬಿತ್ತುವರ ಮಾತು ಕೇಳದೆ ಎರಡು ಸಮುದಾಯದಲ್ಲಿ ತಾಳ್ಮೆಯಿಂದ ಸ್ನೇಹಪರ ಜೀವನ ಮುಖ್ಯ, ಕೆಲವು ದಾರ್ಮಿಕ ಮುಖಂಡರ ಮಾತು ಕೇಳದೆ ನಿಮ್ಮ ಮನಸ್ಸನ್ನು ಶುಧ್ದವಾಗಿ ಇಟ್ಟುಕೊಳ್ಳಿ ಎಂದರು.
ಈದೇ ಸಂಧರ್ಭದಲ್ಲಿ ಪಿಎಸ್‌ಐ ಬಸವರಾಜ್, ಪಿಎಸ್‌ಐ ತಿಮ್ಮಣ್ಣ, ಮುಖಂಡರಾದ ಅತೀಕ್ ರಹಮಾನ್, ಸೈಯದ್, ನಯಾಜ್ , ದಾದಾಪೀರ್, ಬಷೀರ್ ಅಹಾಯತ್, ಅನ್ವರ್ ಮಾಸ್ಟರ್, ಸಾಧಿಕ್ ರಹಮೇನ್, ಅಬ್ಹುಲ್, ರೆಹಮಾನ್, ಸೈಯದ್ ನಬಿ, ಜಮಾತ್ ಇಸ್ಮಾಮಿ ಹಿಂದ್ ಮೋಹಮದ್ ರಪೀಕ್, ಸೈಯದ್ ಅಹಮದ್ ಇತರರು ಇತರರು ಇದ್ದರು.