ಚಳ್ಳಕೆರೆ : ತಾಲೂಕಿನಲ್ಲಿ ಭೂ ಅಕ್ರಮದಾರರಿಗೆ ಸಿಂಹಸ್ವಪ್ನವಾದ ಚಳ್ಳಕೆರೆ ತಹಶಿಲ್ದಾರ್ ಪ್ರತಿನಿತ್ಯವೂ ಒಂದಿಲ್ಲೊಂದು ಭೂ ಅಕ್ರಮ ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ
ಭೂ ಕಬಳಿಗೆ, ಸ್ಮಶಾನ ಒತ್ತುವರಿ, ಶಾಲೆ ಜಾಗ ಒತ್ತುವರಿ ಹಾಗೂ ಗೋಮಾಳ ಒತ್ತುವರಿ ಈಗೇ ಅಕ್ರಮವಾಗಿ ಭೂ ಕಬಳಿಕೆ ಮಾಡುವ ದೂರಾಸೆಯ ವ್ಯಕ್ತಿತ್ವ ಹೊಂದಿದ ಮಾನವನನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಸುಮಾರು ನೂರಾರು ಹೆಕ್ಟೆರ್‌ಗಳಷ್ಟು ಭೂ ಕಬಳಿಕೆ ಮಾಡಿದ್ದರು ಎನ್ನುವ ಆರೋಪದಡಿಯಲ್ಲಿ ತಮ್ಮ ಕಂದಾಯ ಅಧಿಕಾರಿಗಳ ಮಾಹಿತಿಯಂತೆ, ಗ್ರಾಮದಲ್ಲಿ ಭೂ ಒತ್ತುವರಿಯಾದ ಸ್ಥಳಕ್ಕೆ ಕೂಡಲೇ ತೆರುವ ಕಾರ್ಯಕ್ಕೆ ಮುಂದಾಗಿರುವುದು ಕ್ಷೇತ್ರದ ಜನರಿಗೆ ಸಂತಸ ತಂದಿದೆ.
ಅದರಂತೆ ಇಂದು ಕೂಡ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದ ಸರ್ವೆ ನಂಬರ್ 186ರಲ್ಲಿ 5ಎಕರೆ ಗುಂಟೆ ಜಮೀನನ್ನು ಕಳೆದ 4ವರ್ಷಗಳ ಹಿಂದೆ ಸ್ಮಶಾನಕ್ಕಾಗಿ ಕಂದಾಯ ಇಲಾಖೆ ಕಾಯ್ದಿರಿಸಿತ್ತು. ಈ ಜಮೀನಿನಲ್ಲಿ ಮೂರು ಎಕರೆ ಪ್ರದೇಶವನ್ನು ಖಾಸಗಿ ವ್ಯಕ್ತಿಗಳು ಜಮೀನನ್ನು ಒತ್ತುವರಿ ಮಾಡಿದ್ದು ಇದರಿಂದ ಗ್ರಾಮಸ್ಥರಿಗೆ ಸ್ಮಶಾನಕ್ಕೆ ಕೊರತೆ ಉಂಟಾಗಿದ್ದು ವಿಚಾರವನ್ನು ಗ್ರಾಮಸ್ಥರು ತಹಶಿಲ್ದಾರ್ ಗೆ ಮನವಿ ನೀಡಿದ್ದರು.
ಅದರಂತೆ ಇಂದು ತಕ್ಷಣ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಎನ್.ರಘುಮೂರ್ತಿ ಸರ್ವೆ ಅಧಿಕಾರಿ ಮತ್ತು ರಾಜಸ್ವನಿರೀಕ್ಷಕರ ಜೊತೆಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಅಳತೆ ಮಾಡಿಸಿ ಒತ್ತುವರಿದಾರರನ್ನು ನಿರ್ಧಾಕ್ಷಿಣ್ಯವಾಗಿ ಹೊರದೂಡಿ ಜೆಸಿಬಿ ಯಂತ್ರದಿAದ ಟ್ರೆಂಚ್ ತೋಡಿಸಿ ಮೇಲ್ಕಂಡ ಐದು ಎಕರೆ 1 ಗುಂಟೆ ಪ್ರದೇಶದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯೊಳಗೆ ಸ್ಮಶಾನವನ್ನು ಅಭಿವೃದ್ದಿಪಡಿಸುವಂತೆ ಸಂಬಂಧಸಿದ ಪಿಡಿಒ ರವರಿಗೆ ಸೂಚಿಸಿದರು.
ಒತ್ತುವರಿದಾರರ ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ, ಸರ್ಕಾರಿ ಕೆರೆ-ಕುಂಟೆ ಗೋಮಾಳ ಸರ್ಕಾರಿ ದಾರಿ ಇಂಥವುಗಳನ್ನು ಯಾರಾದರೂ ಒತ್ತುವರಿ ಮಾಡಿದ್ದಾರೆ ತಕ್ಷಣ ತೆರವುಗೊಳಿಸುವಂತೆ ಸೂಚಿಸಿದರು ಅವರು ತೆರವುಗೊಳಿಸದಿದ್ದಲ್ಲಿ ಭೂ ಕಂದಾಯ ಕಾಯ್ದೆ 192ಎ ರಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಮೀರಸಾಬಿಹಳ್ಳಿ ಪಂಚಾಯತಿಯ ಅಧ್ಯಕ್ಷರು ಎಲ್ಲಾ ಸದಸ್ಯರು ರಾಜಸ್ವ ನಿರೀಕ್ಷಕರು ಲಿಂಗೇಗೌಡ ಸರ್ವೆಯರ್ ಪ್ರಸನ್ನಕುಮಾರ್ ಉಪಸ್ಥಿತರಿದ್ದರು