ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಶಾರದಾ ಪೂಜೆ ಕಾರ್ಯಕ್ರಮ

ಚಳ್ಳಕೆರೆ :
ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆತಾಗ ಮುಂದಿನ ಉನ್ನತ ವ್ಯಾಸಂಗಕ್ಕೆ ಅನುಕೂಲಕರವಾಗುತ್ತದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗರಾಜ್ ಹೇಳಿದರು.

ಅವರು ಚಳ್ಳಕೆರೆ ತಾಲೂಕಿನ ಬಸಾಪುರದ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ಬಿಲ್ಕೋಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,

ವಿದ್ಯಾರ್ಥಿಗಳು ಚೆನ್ನಾಗಿ ಓದಿ ಒಳ್ಳೆಯ ವಿದ್ಯಾವಂತರಾಗಬೇಕು, ತಂದೆ ತಾಯಿ ಒಳ್ಳೆಯ‌ಮಗನಾಗಿ ಶಿಕ್ಷಕರಿಗೆ ಉತ್ತಮ‌ ವಿದ್ಯಾರ್ಥಿಯಾಗಿ ಒಡನಾಟ ಹೊಂದಬೇಕು ಎಂದರು..

ಇನ್ನೂ ಮುಖ್ಯ ಶಿಕ್ಷಕರಾದ ಕವಿತಾ ಬಿ ಈ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಕಲಿತ ಜ್ಞಾನ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ತಮ್ಮ ಮುಂದಿನ ಗುರಿಗಳನ್ನು ಯಶಸ್ವಿಯಾಗಿ ತಲುಪಲು ಪ್ರಾಥಮಿಕ ಜ್ಞಾನ ಅತ್ಯವಶ್ಯಕವಾಗಿ ಇರುತ್ತದೆ ಇಂತಹ ಜ್ಞಾನವನ್ನು ಸರಿಯಾದ ಸಮಯದಲ್ಲಿ ಸದ್ಬಳಕೆ ಮಾಡಿಕೊಂಡು ಯಶಸ್ಸಿನ ಕಡೆಗೆ ಸಾಗಬೇಕೆಂದು ಮಕ್ಕಳಿಗೆ ಶುಭಾಶಯ ತಿಳಿಸಿದರು

ಸಹ ಶಿಕ್ಷಕ ರಾಜು ಮಾತನಾಡಿ ಏಳನೇ ತರಗತಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿ ಚೆನ್ನಾಗಿ ಅಧ್ಯಯನ ಮಾಡಿ ಕಠಿಣ ಪರಿಶ್ರಮದೊಂದಿಗೆ ಯಶಸ್ಸಿನ ಕಡೆಗೆ ಸಾಗಿ ಗುರುಗಳಿಗೆ ತಂದೆ-ತಾಯಿಗಳಿಗೆ ಕೀರ್ತಿಯನ್ನು ತಂದುಕೊಡುವಂತಹ ವಿದ್ಯಾರ್ಥಿಗಳು ನಿವಾಗಬೇಕೆಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಸಹ ಶಿಕ್ಷಕರುಗಳಾದ ಸಿರಿಯಣ್ಣ ಟಿ, ಆಶಾ ಕುಮಾರಿ .ಟಿ ಹಾಗೂ ಶಾಲೆಯ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!