ಪರುಶುರಾಂಪುರ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಹಾಗೂ ದೇಶ ಮುನ್ನಡೆ ಸಾಧಿಸಬೇಕಾದರೆ ಮಕ್ಕಳಲ್ಲಿ ಚುನಾವಣೆಯ ಪರಿಕಲ್ಪನೆ ಕುರಿತು ಸ್ಪಷ್ಟತೆ ಬರಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕಕ ಮಲ್ಲಿಕಾರ್ಜುನ ಹೇಳಿದ್ದಾರೆ.
ತಾಲೂಕಿನ ಪರುಶುರಾಂಪುರ ಕೆಪಿಎಸ್ ಶಾಲೆಯ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ-ಸಂಸತ್ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು
ಜತೆಗೆ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಮೂಡಬೇಕು. ಆ ದಿಸೆಯಲ್ಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.
ಶಾಲೆಯಲ್ಲಿ ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ,ಬಾಲೆಯರಿಂದ ಮತದಾನ, ಮುಖ್ಯಮಂತ್ರಿ ಆಯ್ಕೆ, ಉಪಮುಖ್ಯಮಂತ್ರಿ, ಸಚಿವರ ಆಯ್ಕೆ.
ಇದು ಸರಕಾರಿ ಗ್ರಾಮದ ಕೆಪಿಎಸ್ ಶಾಲೆಯ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಮಕ್ಕಳ ಸಂಸತ್ ಚುನಾವಣೆಯಲ್ಲಿ ಕಂಡು ಬಂದ ದೃಶ್ಯ.
ಶಾಲೆಯ ವಿವಿಧ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡಾ, ಶಾಲೆ ಸ್ವಚ್ಛತೆ, ಊಟ ಇನ್ನಿತರ ಚಟುವಟಿಕೆಗಳಲ್ಲಿ ಜವಾಬ್ದಾರಿ ತೆಗೆದುಕೊಂಡು ಅದರಲ್ಲಿನ ನ್ಯೂನತೆಗಳನ್ನು ಮುಖ್ಯ ಶಿಕ್ಷಕರಿಗೆ ತೋರಿಸಿ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಈ ಚುನಾವಣೆ ನಡೆಸಲಾಗಿದೆ.
ಅಲ್ಲದೇ ಪಠ್ಯದಲ್ಲಿದ್ದನ್ನು ಪ್ರಾತ್ಯಕ್ಷಿಕವಾಗಿ ತೋರಿಸಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುವುದು ಚುನಾವಣೆ ಮತ್ತು ಸಂಸತ್ ರಚನೆ ಉದ್ದೇಶವಾಗಿದೆ.
ಮಕ್ಕಳಿಗೆ ಜವಾಬ್ದಾರಿ, ಮುಂದಾಳತ್ವ, ಎಲ್ಲರನ್ನು ಸಂಬಾಳಿಸುವ ಶಕ್ತಿಯ ವದ್ಧಿ ಶಾಲಾ ಸಂಸತ್ ಚುನಾವಣೆ ಗುರಿಯಾಗಿದೆ.
ಮಕ್ಕಳೇ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗಿ ಮೊದಲ ಬಾರಿಗೆ ಚುನಾವಣೆ ಅನುಭವ ಪಡೆದರು. ನಿಜವಾದ ವಿಧಾನ ಸಭೆ, ಲೋಕಸಭೆ ಚುನಾವಣೆಗಳ ಮಾದರಿಯಲ್ಲೇ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ, ಹಿಂತೆಗೆದು ಕೊಳ್ಳುವಿಕೆ, ಪ್ರಚಾರ, ಮತದಾನ ಎಲ್ಲವೂ ವ್ಯವಸ್ಥಿತವಾಗಿ ಏರ್ಪಟ್ಟಿತ್ತು. ಪ್ರಜಾ ಪ್ರಭುತ್ವ ಎಂದರೆ ಏನು? ಮತದಾನದ ರೀತಿ ನೀತಿಗಳೇನು, ಮತದಾನ ಹೇಗೆ ಮಾಡಬೇಕು, ಸಂಸತ್ ಹೇಗಿರುತ್ತದೆ, ಮುಖ್ಯಮಂತ್ರಿಗಳ ಕೆಲಸ, ಮಂತ್ರಿಗಳ ಕಾರ್ಯಗಳ ಕುರಿತು ಚುನಾವಣೆ ಮತ್ತು ಸಂಸತ್ ರಚನೆ ಮೂಲಕ ಎಲ್ಲದರ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದರು.
ಮತದಾನಕ್ಕೆ ಒಂದು ದಿನ ಮುಂಚೆ ನಾಮಪತ್ರ, ಪ್ರಚಾರ ನಡೆಯಿತು. ಶನಿವಾರ ಮಕ್ಕಳಿಂದ ಮತದಾನ ನಡೆಯಿತು. ಮತಪತ್ರ ನೀಡುವಿಕೆ, ಶಾಯಿ ಹಚ್ಚುವಿಕೆ, ಮತ ಒತ್ತುವುದು, ಸಹಿ ಮಾಡುವುದು ನಿಜವಾದ ಚುನಾವಣೆಯನ್ನೇ ನೆನೆಪಿಸಿದವು.
ನೂರಾರು ವಿದ್ಯಾರ್ಥಿಗಳು ತಾಸು ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಗುಪ್ತ ಮತದಾನ ಮಾಡಿದರು. ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ, ಚುನಾವಣೆ ಅಧಿಕಾರಿಯಾಗಿ ಸಹ ಶಿಕ್ಷಕರು, ಶಾಲಾ ಸಿಬ್ಬಂದಿಗಳು ಮತಗಟ್ಟೆ ಅಧಿಕಾರಿಗಳಾಗಿ, ಒಬ್ಬ ಸೆಕ್ಟರ್ ಆಫೀಸರ್ ಆಗಿ ಮಕ್ಕಳ ಚುನಾವಣೆಯನ್ನು ನಿಭಾಯಿಸಿದ್ದರು.
ಇದು ಮಕ್ಕಳನ್ನೊಳಗೊಂಡ ಶಾಲಾ ಸಂಸತ್ತು ಇದಾಗಿತ್ತು.