ಕಂಕಣಧಾರಣೆಯೊಂದಿಗೆ ತಿಪ್ಪೇಶನ ಜಾತ್ರೆ ಧಾರ್ಮಿಕ ಆಚರಣೆಗಳಿಗೆ ಚಾಲನೆ.
ನಾಯಕನಹಟ್ಟಿ:: ಮದ್ಯ ಕರ್ನಾಟಕದ ಆರಾಧ್ಯ ದೈವ ಕಾಯಕಯೋಗಿ ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕಂಕಣಧಾರಣೆಯೊಂದಿಗೆ ಜಾತ್ರೆ ಧಾರ್ಮಿಕ ಆಚರಣೆಗೆ ಚಾಲನೆ ಮಾ. 16 ರಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಜರುಗಲಿದೆ.
ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿವೆ. ದೇವಾಲಯದ ಒಳಾಂಗಣದಲ್ಲಿ ಅಲಂಕೃತ ಕುಂಭಗಳು ಹಾಗೂ ದೀಪಗಳೊಂದಿಗೆ
ಕಂಕಣ ಧಾರಣೆ ಮಾಡಲಾಯಿತು. ಪುರೋಹಿತರ ಮಂತ್ರಘೋಷ ಹಾಗೂ ಮಂಗಳ ವಾದ್ಯಗಳೊಂದಿಗೆ ಕಂಕಣಧಾರಣೆ ಕಾರ್ಯಕ್ರಮ ಜರುಗಿತು.
ರಥೋತ್ಸವದಲ್ಲಿ ಪಾಲ್ಗೊಳ್ಳುವ ಪ್ರಮುಖರಿಗೆ ಕಂಕಣ
ಕಟ್ಟ ಧಾರ್ಮಿಕ ಕಾರ್ಯಗಳಲ್ಲಿ, ಪಾಲ್ಗೊಳ್ಳುವುದಕ್ಕೆ ಕಟ್ಟುಪಾಡುಗಳನ್ನು ನೀಡಲಾಯಿತು, ಕಂಕಣಧಾರಣೆ ನಂತರ ಅಲಂಕೃತವಾದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಲಾಯಿತು.
ಈ ಬಾರಿ ಉತ್ಸವ ಮೂರ್ತಿಗೆ ಹೊಸ ಶೈಲಿ ವಿಶ್ವಾಸದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಅಲಂಕಾರಕ್ಕೆ ಬಳಸಲಾಗಿತ್ತು.
ಭಕ್ತಾದಿಗಳು ನೀಡಿದ ಚಿನ್ನದ ಆಭರಣಗಳನ್ನು ಉತ್ಸವ ಮೂರ್ತಿಗೆ ಅಳವಡಿಸಲಾಗಿತ್ತು ಜೊತೆಗೆ ಚಿನ್ನದ ಕಿರೀಟ ವಿಶೇಷವಾಗಿತ್ತು ಇವುಗಳ ಜೊತೆಗೆ ಮಲ್ಲಿಗೆ ಕನಕಂಬರ ಸೇರಿದಂತೆ ಹೂವಿನ ಅಲಂಕಾರ ಗಮನ ಸೆಳೆಯಿತು.
ಇಡೀ ದೇವಾಲಯದಲ್ಲಿ ಚಳ್ಳಕೆರೆ ಖಜನೆಯಲ್ಲಿದ್ದ ದೇವರ ಆವರಣಗಳನ್ನು ಸೂಕ್ತ ಪೊಲೀಸ್ ಭದ್ರತೆಯೊಂದಿಗೆ.
ತರಲಾಗಿತ್ತು ಜಾತ್ರೆ ಮುಕ್ತಾಯದವರಿಗೆ ಉತ್ಸವ ಮೂರ್ತಿಗೆ ವಿಶೇಷ ಪೊಲೀಸ್ ಭದ್ರತೆ ಒದಗಿಸಲಾಗಿದೆ ಭಕ್ತಾದಿಗಳು ದೇವರ ಉತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು ಕಂಕಣಧಾರಣೆಯಿಂದ ಜಾತ್ರೆ ಮುಕ್ತಾಯದವರಿಗೆ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಗಮನ ಸೆಳೆಯುತ್ತದೆ.
ಅಲಂಕೃತ ಉತ್ಸವ ಮೂರ್ತಿಯನ್ನು ನಂತರ ದೇವಾಲಯದ ಒಳಾಂಗಣದಲ್ಲಿ ಮೂರು ಬಾರಿ ಪ್ರದಕ್ಷಣೆ ಮಾಡಲಾಯಿತು. ಭಕ್ತರು ದೇವಾಲಯದಲ್ಲಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ನಂದಿ ದ್ವಜ ದೇವಾಲಯದ ಮಂಗಳವಾದ್ಯವು ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಆಯಗಾರರು ಮಡಿವಾಳ ಗೌಡ ಗೊಂಚಿ ತಳವಾರ ಸೇರಿದಂತೆ ಸೇವಕರ್ತರು ಭಾಗವಹಿಸಿದ್ದರು ಪ್ರತಿದಿನ ಒಂದು ವಾಹನದಲ್ಲಿ ದೇವರ ಉತ್ಸವ ಜರುಗಲಿದೆ.
ಗಜ ಅಶ್ವ ನವಿಲು ಸೇರಿದಂತೆ ವಾಹನಗಳ ಉತ್ಸವಗಳು ರಥ ಬೀದಿಯಲ್ಲಿ ಸಾಗಲಿವೆ. ರಥೋತ್ಸವಕ್ಕಾಗಿ ಹೊರಮಠ ಒಳಮಠ ವಿಶೇಷ ದೀಪಾಲಂಕಾರ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಬಿ. ಟಿ.ಕುಮಾರಸ್ವಾಮಿ, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ, ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಮಾಜಿ ಅಧ್ಯಕ್ಷ ರವಿಶಂಕರ್, ತಿಪ್ಪೇರುದ್ರಪ್ಪ, ಎಂ.ವೈ.ಟಿ. ಸ್ವಾಮಿ ,ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಸದಸ್ಯರಾದ ಜೆ.ಆರ್. ರವಿಕುಮಾರ್, ಎನ್ ಮಹಾಂತಣ್ಣ, ವಿನುತಾ, ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್, ದೇವಸ್ಥಾನದ ಸಿಬ್ಬಂದಿ ಎಸ್ ಸತೀಶ್, ಮನು, ಭಕ್ತಾದಿಗಳು ಉಪಸ್ಥಿತರಿದ್ದರು

