“ನಿತ್ಯ ಜೀವನದಲ್ಲಿ ಶ್ರೀರಾಮಕೃಷ್ಣರ ಸಂದೇಶಗಳ ಪಾಲನೆ ಅಗತ್ಯ”;-ಶ್ರೀಮತಿ ಗೀತಾ ನಾಗರಾಜ್.
ಚಳ್ಳಕೆರೆ:-ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಜೀವಿತಾವಧಿಯಲ್ಲಿ ಪ್ರತಿಪಾದಿಸಿದ ಸಂದೇಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಪಾಲಿಸುವ ಅಗತ್ಯವಿದೆ ಎಂದು ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗೀತಾ ನಾಗರಾಜ್ ಅಭಿಪ್ರಾಯಪಟ್ಟರು. ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ವಾಲ್ಮೀಕಿ ನಗರದ ಸಹ್ಯಾದ್ರಿ ನಿವಾಸದಲ್ಲಿ ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ190ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ,108 ಶ್ರೀರಾಮಕೃಷ್ಣರ ನಾಮಸ್ಮರಣೆ, ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು.ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ, ಟಿ,ಎಂ ವಿಜಯಕಲಾ,
ಲಕ್ಷ್ಮೀದೇವಮ್ಮ, ಗಿರಿಜಾಮ್ಮ, ಯತೀಶ್ ಎಂ ಸಿದ್ದಾಪುರ, ಮೋಹಿನಿ, ತಿಪ್ಪಮ್ಮ,ಜಯಮ್ಮ, ಗಂಗಾಂಬಿಕೆ, ವಸಂತಕುಮಾರಿ, ಸುಜಾತ, ಪ್ರಿಯಾಂಕ ಭಾಗವಹಿಸಿದ್ದರು.

